ಮೈಸೂರು

ನಾಡಪ್ರಭು ಕೆಂಪೇಗೌಡರ ರಾಷ್ಟ್ರೀಯ ಉತ್ಸವ ; ಹೆಸರು ನೋಂದಾವಣೆಗೆ ಕರೆ

ನಾಡಪ್ರಭು ಕೆಂಪೇಗೌಡರ ರಾಷ್ಟ್ರೀಯ ಉತ್ಸವವನ್ನು ನವದೆಹಲಿಯಲ್ಲಿ ಹಮ್ಮಿಕೊಂಡಿದ್ದು ಪಾಲ್ಗೊಳ್ಳಲಿಚ್ಛಿಸುವವರು ಹೆಸರು ನೋಂದಾಯಿಸಿಕೊಳ್ಳಲು ವಿಶ್ವ ಒಕ್ಕಲಿಗ ಸಂಘದ ರಾಜ್ಯಾಧ‍್ಯಕ್ಷ ಅಂಚಿ ಸಣ್ಣಸ್ವಾಮಿ ಗೌಡ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ವಿಶ್ವ ಒಕ್ಕಲಿಗರ ಮಹಾವೇದಿಕೆ, ರಾಜ್ಯ ಒಕ್ಕಲಿಗರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಹಾಘೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ, ಏಪ್ರಿಲ್ 15 ಮತ್ತು 16ರಂದು ನವದೆಹಲಿಯ ತಾಲ್ ಕಠೋರ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕೆಂಪೇಗೌಡರ ರಾಷ್ಟ್ರೀಯ ಉತ್ಸವಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಚಾಲನೆ ನೀಡುವರು, ಮಾಜಿ ಪ್ರಧಾನಿ ದೇವೇಗೌಡ ಉತ್ಸವದ ಮಾರ್ಗದರ್ಶಕರಾಗಿದ್ದರೆ, ಸಮಾರಂಭದಲ್ಲಿ ಕೇಂದ್ರ ಸಚಿವರಾದ ಅನಂತ ಕುಮಾರ್, ಡಿ.ವಿ.ಸದಾನಂದಗೌಡ, ಶೋಭಾ ಕರಂದ್ಲಾಜೆ ಸೇರಿದಂತೆ ಹಲವಾರು ರಾಜ್ಯ ಹಾಗೂ ರಾಷ್ಟ್ರ ಮುಖಂಡರು ಪಾಲ್ಗೊಳ್ಳುವರು ಎಂದು ತಿಳಿಸಿದರು.

ಐತಿಹಾಸಿಕ ಉತ್ಸವವಾಗಿದ್ದು ಜಾತಿ,ಮತಪಂಥ ಭೇದವಿಲ್ಲದೇ ಪಾಲ್ಗೊಳ್ಳಬಹುದು ಎಂದು ಆಹ್ವಾನಿಸಿದ ಅವರು, ಕೆಂಪೇಗೌಡರ ಜಯಂತಿಯನ್ನು ರಜೆ ನೀಡದಂತೆ ಸರ್ಕಾರದ ಮಟ್ಟದಲ್ಲಿ ಆಚರಿಸಬೇಕು, ಅಲ್ಲದೇ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾಗೂ ಮೆಟ್ರೋಗೆ ಕೆಂಪೇಗೌಡರ ಹೆಸರಿಡಬೇಕೆಂಬ ಬೇಡಿಕೆಗಳನ್ನು ಉತ್ಸವದಲ್ಲಿ ಸರ್ಕಾರಕ್ಕೆ ಒಕ್ಕೊರಲಿನಿಂದ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಮೈಸೂರು ಜಿಲ್ಲೆಯಿಂದ ಸುಮಾರು 1 ಸಾವಿರಕ್ಕೂ ಅಧಿಕ ಸಮಾಜ ಬಾಂಧವರು ಹಾಗೂ ರಾಜ್ಯದಿಂದ 5 ಸಾವಿರಕ್ಕೂ ಹೆಚ್ಚು ಮಂದಿ ಉತ್ಸವದಲ್ಲಿ ಪಾಲ್ಗೊಳ್ಳಲುವ ನಿರೀಕ್ಷೆಯಿದೆ ಎಂದ ಅವರು, ಮುಂಗಡವಾಗಿ ರೈಲು ಹಾಗೂ ವಿಮಾನಗಳಿಗೆ ಟಿಕೇಟ್ ಕಾದಿರಿಸಬೇಕಾಗಿದ್ದು ಉತ್ಸವ ಹಿನ್ನೆಲೆಯಲ್ಲಿ ವಿಶೇಷ ರಿಯಾಯಿತಿಯನ್ನು ನೀಡಲಾಗಿದೆ. ರೈಲು ಹಾಗೂ ವಿಮಾನ ಪ್ರಯಾಣಕ್ಕೆ ಕ್ರಮವಾಗಿ 10 /20 ಸಾವಿರ ರೂಪಾಯಿಗಳಾಗಿದೆ, ಅನ್ವಯಿಸುವ ದರವು 5 ದಿನಗಳ ಊಟ ಮತ್ತು ವಸತಿ ಹಾಗೂ ಮೂರು ದಿನಗಳ ಪ್ರವಾಸವನ್ನು ಒಳಗೊಂಡಿದೆ ಎಂದು ತಿಳಿಸಿದರು. ಆಸಕ್ತರು ಹೆಸರು ನೋಂದಾಯಿಸಿಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ : 9036423999 ಅನ್ನು ಸಂಪರ್ಕಿಸಿ ಎಂದರು.

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಶ್ರೀನಿವಾಸ್, ಮೈಸೂರು ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ರಾಜಕುಮಾರ್, ವಿಶ್ವ ಒಕ್ಕಲಿಗರ ಜಿಲ್ಲಾಧ್ಯಕ್ಷ ದೊರೆಸ್ವಾಮಿ, ಕೆ.ಜಿ.ಕೊಪ್ಪಲಿನ ಒಕ್ಕಲಿಗರ ಹಿತರಕ್ಷಣಾ ಸಮಿತಿಯ ಶಿವಕುಮಾರ್, ಖಜಾಂಚಿ ಸಣ್ಣಸ್ವಾಮಿ ಗೌಡ, ನೇಗಿಲಯೋಗಿ ಅಧ್ಯಕ್ಷ ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

 

Leave a Reply

comments

Related Articles

error: