ಕರ್ನಾಟಕ

ಚಾಕೇನಹಳ್ಳಿ ಅಣೆಕಟ್ಟೆಗೆ ಬಾಗಿನ ಸಮರ್ಪಣೆ

ಹಾಸನ (ಅ.10): ಸಂಸದರಾದ ಪ್ರಜ್ವಲ್ ರೇವಣ್ಣ, ಶಾಸಕರಾದ ಹೆಚ್.ಡಿ. ರೇವಣ್ಣ ಹಾಗೂ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಭವಾನಿ ರೇವಣ್ಣ ಅವರಿಂದು ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆ ಹೋಬಳಿಯ ಚಾಕೇನಹಳ್ಳಿ ಅಣೆಕಟ್ಟೆಗೆ ಬುಧವಾರಂದು ಬಾಗಿನ ಅರ್ಪಿಸಿದರು.

ನಂತರ ಮಾತನಾಡಿದ ಸಂಸದರಾದ ಪ್ರಜ್ವಲ್ ರೇವಣ್ಣ ಅವರು ಈ ಬಾರಿ ಉತ್ತಮ ಮಳೆಯಾಗಿದ್ದು ಹಲವಾರು ವರ್ಷಗಳಿಂದ ತುಂಬಿರದ ಎಲ್ಲಾ ನದಿಗಳು ಹಾಗೂ ಕೆರೆ ಕಟ್ಟೆಗಳು ಪೂರ್ಣ ಪ್ರಮಾಣದಲ್ಲಿ ತುಂಬಿವೆ. ಚಾಕೇನಹಳ್ಳಿ ಅಣೆಕಟ್ಟೆಯು ಸುಮಾರು 10 ವರ್ಷಗಳ ನಂತರ ತುಂಬಿದ್ದು, ರೈತರಿಗೆ ಕೃಷಿ ಚಟುವಟಿಕೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.

ಸಕಲೇಶಪುರ ತಾಲ್ಲೂಕಿನಲ್ಲಿ ಹೆಚ್ಚಿರುವ ಆನೆ ಹಾವಳಿ ಬಗ್ಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಆನೆಗಳನ್ನು ಬೇರೆ ಪ್ರದೇಶಗಳಿಗೆ ವರ್ಗಾಯಿಸುವುದು ಸೂಕ್ತವಲ್ಲ ಬದಲಿಗೆ ಪರ್ಯಾಯ ಮಾರ್ಗವನ್ನು ರೂಪಿಸಿಕೊಳ್ಳಬೇಕು ಎಂದು ಸಂಸದರಾದ ಪ್ರಜ್ವಲ್ ರೇವಣ್ಣ ತಿಳಿಸಿದರು

ಆನೆಗಳು ಓಡಾಡುವ ಜಾಗದಲ್ಲಿ ಮನೆ, ರಸ್ತೆ ನಿರ್ಮಾಣವಾಗಿರುವುದು ಸಮಸ್ಯೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಶಾಸಕರಾದ ಹೆಚ್.ಡಿ. ರೇವಣ್ಣ ಅವರು ಮಾತನಾಡಿ ಚಾಕೇನಹಳ್ಳಿ ಅಣೆಕಟ್ಟು ಹಲವಾರು ವರ್ಷಗಳ ನಂತರ ತುಂಬಿರುವುದು ಸಂತಸ ತಂದಿದೆ.
ಹಾಸನ, ಮಂಡ್ಯ ಸೇರಿದಂತೆ ಹೇಮಾವತಿ ಯೋಜನೆಯ ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಒಳಪಡುವ ಕೆಲಸಗಳು ಬಾಕಿ ಉಳಿದಿದ್ದು ಅವುಗಳು ಶೀಘ್ರವಾಗಿ ಪೂರ್ಣಗೊಳ್ಳಬೇಕು ಎಂದರು. ಈ ಸಂದರ್ಭ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಭವಾನಿ ರೇವಣ್ಣ ಮತ್ತಿತರರು ಹಾಜರಿದ್ದರು. (ಎನ್.ಬಿ)

Leave a Reply

comments

Related Articles

error: