ಪ್ರಮುಖ ಸುದ್ದಿ

ರೋಟರಿಯಲ್ಲಿ ಮಾಹಿತಿ ಫಲಕ ಅನಾವರಣ

ರಾಜ್ಯ( ಮಡಿಕೇರಿ) ಅ.10: -ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ರೋಟರಿ ಸಭಾಂಗಣದ ಮುಂಬದಿ ರೋಟರಿ ಯೋಜನೆ ಬಿಂಬಿಸುವ ಬೃಹತ್ ಫಲಕವನ್ನು ರೋಟರಿ ಜಿಲ್ಲಾ ರಾಜ್ಯಪಾಲ ಜೊಸೇಫ್ ಮ್ಯಾಥ್ಯು ಅನಾವರಣಗೊಳಿಸಿದರು.

ಮಡಿಕೇರಿ – ಮೈಸೂರುರಸ್ತೆ ಬದಿಯಲ್ಲಿನ ರೋಟರಿ ಸಭಾಂಗಣದ ಮುಂಬದಿ ರೋಟರಿ ಯೋಜನೆಗಳನ್ನು ಸಾರ್ವಜನಿಕರಿಗೆ ಬಿಂಬಿಸುವ ಮಾಹಿತಿ ಫಲಕವನ್ನು ಅನಾವರಣಗೊಳಿಸಿದ ಜೊಸೇಫ್ ಮ್ಯಾಥ್ಯು, ಇದರಿಂದಾಗಿ ರೋಟರಿಯ ಹಲವಾರು ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ಸೂಕ್ತ ಮಾಹಿತಿ ತಿಳಿಯಲು ನೆರವಾಗುತ್ತದೆ. ಹೊಸ ಯೋಜನೆಗಳಿಗೆ ಹಾಗೂ ಜನರಅಗತ್ಯತೆ ತಿಳಿಯಲು ಈ ಮಾಹಿತಿ ಸೂಕ್ತ ರೀತಿಯಲ್ಲಿ ನೆರವಾಗುತ್ತದೆಎಂದು ಪ್ರಶಂಶಿಸಿದರು.

ಮಡಿಕೇರಿ ರೋಟರಿ ಕ್ಲಬ್‍ ಅಧ್ಯಕ್ಷ ರತನ್‍ ತಮ್ಮಯ್ಯ, ಕಾರ್ಯದರ್ಶಿ ಕೆ.ಸಿ.ಕಾರ್ಯಪ್ಪ, ರೋಟರಿ ಸಹಾಯಕ ಗವರ್ನರ್ ಪಿ.ನಾಗೇಶ್, ವಲಯ 6 ರ ಕಾರ್ಯದರ್ಶಿ ಅನಿಲ್ ಎಚ್.ಟಿ., ಜೋನಲ್ ಲೆಫ್ಟಿನೆಂಟ್‍ ಕೇಶವಪ್ರಸಾದ್ ಮುಳಿಯ, ರೋಟರಿ ಮಾಜಿ ರಾಜ್ಯಪಾಲ ಮಾತಂಡ ಸುರೇಶ್‍ಚಂಗಪ್ಪ, ಈಶ್ವರ ಭಟ್, ಅಮರ್ ಶರ್ಮ , ಕರುಂಬಯ್ಯ, ದೇವಣಿರಕಿರಣ್ ಸೇರಿದಂತೆ ರೋಟರಿ ಪದಾಧಿಕಾರಿಗಳು ಈ ಸಂದರ್ಭ ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: