ಪ್ರಮುಖ ಸುದ್ದಿ

ಮಹಾತ್ಮ ಗಾಂಧಿ ಜೀವನ ಸಾಧನೆ : ‘ಛಾಯಾಚಿತ್ರ ಪ್ರದರ್ಶನ’ಕ್ಕೆ ಚಾಲನೆ

ರಾಜ್ಯ(ಮಡಿಕೇರಿ) ಅ.11 :- ಮಹಾತ್ಮ ಗಾಂಧೀಜಿಯವರ ಜೀವನ ಮತ್ತು ಸಾಧನೆ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಏರ್ಪಡಿಸಿರುವ ಅಪರೂಪದ ‘ಛಾಯಾಚಿತ್ರ ಪ್ರದರ್ಶನ’ಕ್ಕೆ ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ ಅವರು  ಚಾಲನೆ ನೀಡಿದರು.

ಮಹಾತ್ಮ ಗಾಂಧೀಜಿಯವರ 150 ನೇ ವರ್ಷಾಚರಣೆ ಪ್ರಯುಕ್ತ ನಗರದ ಡಿ.ದೇವರಾಜ ಅರಸು ಭವನದಲ್ಲಿ ಅಕ್ಟೋಬರ್ 12 ರವರೆಗೆ ಏರ್ಪಡಿಸಿರುವ ಛಾಯಾಚಿತ್ರ ಪ್ರದರ್ಶನದಲ್ಲಿ ಗಾಂಧೀಜಿಯವರ ತಂದೆ, ತಾಯಿಯ ಫೋಟೋ ಜೊತೆ ಪರಿಚಯ, ಬಾಲ್ಯ ಹಾಗೂ ಶಿಕ್ಷಣ, ವಕೀಲ ವೃತ್ತಿ, ಸಬರಮತಿ ಆಶ್ರಮ, ಜಲಿಯನ್ ವಾಲಬಾಗ್ ಘಟನೆ, ಬೆಳಗಾವಿ ಕಾಂಗ್ರೇಸ್ ಅಧ್ಯಕ್ಷ ಸ್ಥಾನ ಅಲಂಕಾರ, ಉಪ್ಪಿನ ಸತ್ಯಾಗ್ರಹ, ಗಾಂಧೀಜಿ ಮತ್ತು ಜಿನ್ನಾ ಮಾತುಕತೆ, ಭಾರತ ಬಿಟ್ಟು ತೊಲಗಿ,  ಹಾಗೆಯೇ ಗಾಂಧೀಜಿಯವರು ನಡೆಸಿದ ಪ್ರಾರ್ಥನಾ ಸಭೆ, ಶಾಂತಿ ಮಂತ್ರ, ಸರಳತೆಯ ದೂರ ದೃಷ್ಟಿ ಹಾಗೂ ವಿಚಾರ ಧಾರೆಗಳು ಮತ್ತಿತರವನ್ನು ಛಾಯಾಚಿತ್ರ ಪ್ರದರ್ಶನದಲ್ಲಿ ವೀಕ್ಷಿಸಬಹುದಾಗಿದೆ. ಬಾಲ್ಯ ಶಿಕ್ಷಣ ಹೋರಾಟ ಸತ್ಯಾಗ್ರಹಗಳು ಪ್ರಮುಖರೊಡಗಿನ ಮಾತುಕತೆ ನಡೆಸುವ ಮಹಾತ್ಮ ಗಾಂಧೀಜಿಯವರ ಛಾಯಾಚಿತ್ರಗಳು ಗಮನ ಸೆಳೆಯುತ್ತವೆ.

ಸರ್ವೋದಯ ಸಮಿತಿ ಅಧ್ಯಕ್ಷರಾದ ಟಿ.ಪಿ.ರಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್,  ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್, ವಾರ್ತಾಧಿಕಾರಿ ಚಿನ್ನಸ್ವಾಮಿ, ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಪುಟ್ಟರಾಜು ಇತರರು ಹಾಜರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: