
ಮೈಸೂರು
ನಾಳೆ ಮೈಸೂರಿನಲ್ಲಿ ಗಾಳಿಪಟ ಉತ್ಸವಕ್ಕೆ ಚಾಲನೆ
ಮೈಸೂರು,ಅ.11:- ಮೈಸೂರು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ದಸರಾ ಪ್ರವಾಸೋದ್ಯಮ ಉಪ ಸಮಿತಿ ವತಿಯಿಂದ ಎರಡು ದಿನಗಳ ಗಾಳಿಪಟ ಉತ್ಸವವನ್ನು ಆಯೋಜಿಸಲಾಗಿದೆ.
ಅ.12ರ ಶನಿವಾರ ಸಂಜೆ 5ಗಂಟೆಗೆ ಲಲಿತಮಹಲ್ ಹೆಲಿಪ್ಯಾಡ್ ನಲ್ಲಿ ಉತ್ಸವಕ್ಕೆ ಚಾಲನೆ ದೊರಕಲಿದ್ದು, ಅ.13ರಂದು ಬೆಳಿಗ್ಗೆ 10ಗಂಟೆಯಿಂದ ಸಂಜೆ 5ಗಂಟೆಯವರೆಗೆ ಮಹಾರಾಷ್ಟ್ರ, ಗುಜರಾತ್, ರಾಜ್ ಕೋಟ್, ಸೂರತ್, ವಡೋದರಾ, ಹೈದ್ರಾಬಾದ್, ಮಂಗಳೂರು ಹಾಗೂ ಬೆಂಗಳೂರಿನ ವೃತ್ತಿ ನಿರತರು ಗಾಳಿಪಟದ ಪ್ರದರ್ಶನ, ಮಾರಾಟ ಹಾಗೂ ಕಾರ್ಯಾಗಾರ ನಡೆಸಿಕೊಡಲಿದ್ದಾರೆ.
ಎರಡು ದಿನವೂ ಸಂಜೆ ಸಾಮಸ್ಕೃತಿಕ ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಗಿದೆ. ಎಲ್ಲಾ ವಯೋಮಾನದವರೂ ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ. (ಕೆ.ಎಸ್,ಎಸ್.ಎಚ್)