ಪ್ರಮುಖ ಸುದ್ದಿಮೈಸೂರು

ಮೆಲ್ಲುಸಿರೇ ಸವಿಗಾನ ಸಂಗೀತ ಸಂಜೆ ನಾಳೆ

ಮೈಸೂರು,ಅ.11: ಹಳೇಬೇರು ಹೊಸಚಿಗುರು ಕಲ್ಚರಲ್ ಟ್ರಸ್ಟ್‌ ,ಜಿ.ಆರ್.ಸ್ನೇಹ ಬಳಗ ಹಾಗೂ ಸಿರಿ ಟಿವಿ ವತಿಯಿಂದ ಮೆಲ್ಲುಸಿರೇ ಸವಿಗಾನ ಸಂಗೀತ ಹಳೇ ಕನ್ನಡ ಹಿಂದಿ ಹಾಡುಗಳ ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗಾಯಕ ರೇವಣ್ಣ ತಿಳಿಸಿದರು.

ಹಳೇಬೇರು ಹೊಸಚಿಗುರು ಕಲ್ಚರಲ್ ಟ್ರಸ್ಟ್‌ ನ 3 ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಅ.12 ರಂದು ಶಾರದ ವಿಲಾಸ ಶತಮಾನೋತ್ಸವ ಭವನದಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.ಅದರ ಜೊತೆಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.

ಸಂಗೀತ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಚಾಲನೆ ನೀಡಲಿದ್ದಾರೆ.ಹಾಡುತಿದೆ ಕನ್ನಡ ಕೋಗಿಲೆ ಸೀಜನ್ 2 ರ ವಿಜೇತ ಖಾಸಿಂ ಆಲಿ ಹಾಗೂ ಕೊಪ್ಪಳದ ಗಂಗಮ್ಮರವರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುದ್ದಿ ಗೋಷ್ಠಿಯಲ್ಲಿ ಗಂಗಮ್ಮ ಸೇರಿದಂತೆ ಇತರರು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: