ಮೈಸೂರು

2030ರ ವೇಳೆ ಡಿಜಿಟಲ್ ಶಿಕ್ಷಣ ವಿದ್ಯಾರ್ಥಿಗಳ ಸಂಖ್ಯೆಯನ್ನು ಶೇ.50ರಷ್ಟು ತಲುಪುವ ಉದ್ದೇಶ ಹೊಂದಲಾಗಿದೆ : ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಅ.11:- ಆಧುನಿಕ ಯುಗದಲ್ಲಿ ಎಲ್ಲವೂ ಡಿಜಿಟಲ್ ಮಯವಾಗಿದ್ದು, ಡಿಜಿಟಲ್ ಮೋಡ್ ನಲ್ಲಿದ್ದೇವೆ. ಕಳೆದ  10 ವರ್ಷಗಳ ಹಿಂದೆ ಶೇ.10ರಷ್ಟು ಇದ್ದ  ಡಿಜಿಟಲ್ ಶಿಕ್ಷಣ ವಿದ್ಯಾರ್ಥಿಗಳ ಸಂಖ್ಯೆ, ಇಂದು ಶೇ.23ಕ್ಕೆ ಏರಿಕೆಯಾಗಿದ್ದು,   2030ರ ವೇಳೆ ಶೇ.50 ರಷ್ಟು ತಲುಪುವ ಉದ್ದೇಶ ಹೊಂದಲಾಗಿದೆ ಎಂದು  ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ಅವರಿಂದು ರಾಣಿಬಹದ್ದೂರ್ ಸಭಾಂಗಣದಲ್ಲಿ ಎಸ್ ಡಬ್ಲ್ಯೂ ಎವೈಎಂ ಡಿಜಿಟಲ್ ಲರ್ನಿಂಗ್ & ಮಾನಿಟರಿಂಗ್ ಸೆಲ್ ವತಿಯಿಂದ ಹಮ್ಮಿಕೊಳ್ಳಲಾದ ಪರಿಚಯಾತ್ಮಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.  ಸ್ಟಡಿ ವೆಬ್ಸ್ ಆಫ್ ಆ್ಯಕ್ಟಿವ್ ಲರ್ನಿಂಗ್ ನ್ನು ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಜ್ಞಾನವನ್ನು ಗಳಿಸಬೇಕು. ಮುಕ್ತ  ಆನ್ ಲೈನ್ ಯುತವಾದ ‘ಮೂಕ್ಸ್’ ಕೋರ್ಸ್ ಗಳು ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನವನ್ನು ನೀಡಲಿವೆ.  ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಗೆ ಸಹಕಾರಿಯಾಗಬೇಕು ಹಾಗೂ ವಿದ್ಯಾರ್ಥಿಗಳನ್ನು ಡಿಜಿಟಲ್ ಶಿಕ್ಷಣದತ್ತ ಕೊಂಡೊಯ್ಯಬೇಕು ಎಂಬ ಉದ್ದೇಶದಿಂದ ಯುಜಿಸಿಯ ಮೂಕ್ಸ್ ಪ್ರಾಜೆಕ್ಸ್ ಅಡಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರಗಳಲ್ಲಿ ಸ್ವೈಯಂ ನ್ನು ಅಳವಡಿಸಿಕೊಳ್ಳಲಾಗಿದೆ.  ಈ ಕೋರ್ಸ್ ಗಳನ್ನು ಮೈಸೂರು ವಿವಿ ಅಂಗಸಂಸ್ಥೆ ಕಾಲೇಜುಗಳಿಗೆ ಸಿಗುವಂತೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಸ್ವೈಯಂ ಅಡಿಯಲ್ಲಿ ವಿಷಯಗಳನ್ನು ಆಯ್ಕೆ ಮಾಡುವ ಅವಕಾಶವಿರಲಿದೆ ಎಂದರು.  ವಿದ್ಯಾರ್ಥಿಗಳ ಜ್ಞಾನದ ಹಸಿವನ್ನು ನೀಗಿಸಲಿದ್ದು, ಬೆರಳ ತುದಿಯಲ್ಲಿ ಗುಣಮಟ್ಟದ ಶಿಕ್ಷಣ ಲಭಿಸಲಿದೆ. ಒಂದೇ ಕಡೆ ಕುಳಿತು ವಿದ್ಯಾರ್ಥಿಗಳು ಕಲಿಯುವ ಅಗತ್ಯವಿರಲ್ಲ. ಮೂಕ್ಸ್ ದೇಶದ ಅತ್ಯುತ್ತಮ ಶಿಕ್ಷಣ ತಜ್ಞರಿಂದ  ಮಾಹಿತಿ ಮತ್ತು ತಂತ್ರಜ್ಞಾನವನ್ನು ಆಧರಿಸಿದೆ ಎಂದು ತಿಳಿಸಿದರು. ಯಾವ ವೇಳೆಯಲ್ಲಾದರೂ, ಎಲ್ಲಿಯಾದರೂ ಕಲಿಯುವ ಅವಕಾಶವಿದೆ. ಶಿಕ್ಷಣದಲ್ಲಿ ಪಾರದರ್ಶಕತೆ ತರುತ್ತಿರುವುದು ಉತ್ತಮ ಬೆಳವಣಿಗೆ. ತಂತ್ರಜ್ಞಾನಗಳು ಅಭಿವೃದ್ಧಿಯಾದಂತೆ ಅಪ್ ಡೇಟ್ ಮಾಹಿತಿಗಳು ಲಭಿಸಲಿವೆ ಎಂದರು.

ಯೋಚಿಸಿ, ಪರಾಮರ್ಶಿಸಿ ಪರೀಕ್ಷೆ ಬರೆಯಬಹುದು. ಜಸ್ಟ್ ಲಾಗಿನ್  ಮಾಡಿದರೆ ಆಯಿತು. ಕಲಿಯುವುದು ಹೇಗೆ? ಪರೀಕ್ಷೆ ಬರೆಯುವುದು ಹೇಗೆ? ಯಾವ ರೀತಿ ಕಲಿಯಬೇಕು ಎಂಬುದನ್ನು ತಿಳಿಸಿಕೊಡಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು.

ವಿಜ್ಞಾನಿ ಅಭಿಷೇಕ್ ಕುಮಾರ್ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿ ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಬಹುಸಂಖ್ಯಾತ ವಿದ್ಯಾರ್ಥಿಗಳು ತೊಡಗಿಸಿಕೊಂಡಿರುತ್ತಾರೆ. ಸಾಮಾಜಿಕ ಜಾಲತಾಣ ಬಳಕೆ ಮಾದರಿಯಲ್ಲೇ ನಿಮಗೆ ಬೇಕಾದ ವಿಷಯಗಳನ್ನು ಸ್ವಯಂ ನಲ್ಲಿ ಕಲಿಯಬಹುದು ಎಂದರು.

ಇ-ಕಲಿಕೆ ಮತ್ತು ಅಂತರ್ಜಾಲ ಕಲಿಕೆಗೆ ವ್ಯತ್ಯಾಸವಿದ್ದು, ಇ-ಕಲಿಕೆಯಲ್ಲಿ ನಿತ್ಯದ ಬೆಳವಣಿಗೆ, ಶಿಕ್ಷಕರ ಉಪನ್ಯಾಸ ಮಾಹಿತಿಯನ್ನು ಕಲಿತರೆ, ಅಂತರ್ಜಾಲ ಕಲಿಕೆಯಲ್ಲಿ ಗೂಗಲ್, ವಿಕಿಪೀಡಿಯವನ್ನು ಅವಲಂಬಿಸಬೇಕು. ಇದರಿಂದ ನಿಮ್ಮ ಜ್ಞಾನದ ಮಟ್ಟ ಕುಂದುತ್ತಾ ಹೋಗುತ್ತದೆ ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಸಂಚಾಲಕ ಎಚ್.ಎಸ್.ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: