ಪ್ರಮುಖ ಸುದ್ದಿಮನರಂಜನೆ

ಬಿಗ್ ಬಾಸ್ 13′ ಸ್ಥಗಿತಗೊಳಿಸಲು ಹೆಚ್ಚಿದ ಬೇಡಿಕೆ : ವರದಿ ಕೋರಿದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ

ದೇಶ(ನವದೆಹಲಿ)ಅ.11:- ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಿರೂಪಣೆ ನಡೆಸುತ್ತಿರುವ   ವಿವಾದಾತ್ಮಕ ರಿಯಾಲಿಟಿ ಶೋ  ‘ಬಿಗ್ ಬಾಸ್ 13’ ಬಿಕ್ಕಟ್ಟು ಇನ್ನಷ್ಟು ಹೆಚ್ಚುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಪ್ರಾರಂಭವಾದ ಈ ಪ್ರತಿಭಟನೆ ಈಗ ಪ್ರಸಾರ ಸಚಿವಾಲಯದ ಕಿವಿಯನ್ನು ತಲುಪಿದ್ದು, ಕಾರ್ಯಕ್ರಮವನ್ನು ನಿಲ್ಲಿಸಬೇಕೆಂದು ಮನವಿ ಸಲ್ಲಿಸಿರುವ ಶಾಸಕರ ಬೇಡಿಕೆಯ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

‘ಬಿಗ್ ಬಾಸ್’ ವಿವಾದದ ಬಗ್ಗೆ ಮಾಹಿತಿ ಪ್ರಸಾರ ಸಚಿವಾಲಯವು ಎಲೆಕ್ಟ್ರಾನಿಕ್ ಮೀಡಿಯಾ ಮಾನಿಟರಿಂಗ್ ಕೇಂದ್ರದಿಂದ ವರದಿ ಕೋರಿದೆ ಎಂಬ ಮಾಹಿತಿ ಇತ್ತೀಚೆಗೆ ಬಂದಿದೆ. ಯಾಕೆಂದರೆ ಯುಪಿ ಶಾಸಕ ಸೇರಿದಂತೆ, ಅನೇಕ ಸಂಘಟನೆಗಳು ‘ಬಿಗ್ ಬಾಸ್’ ಕಾರ್ಯಕ್ರಮವನ್ನು ವಿರೋಧಿಸಿದ್ದವು.

ವಾಸ್ತವವಾಗಿ, ‘ಬಿಗ್ ಬಾಸ್ 13’ ಅನ್ನು ಸ್ಥಗಿತಗೊಳಿಸುವ ಬೇಡಿಕೆ  ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಕಳೆದ ಮೂರು ದಿನಗಳಿಂದ ಕಾರ್ಯಕ್ರಮದ ಕುರಿತು ಪ್ರತಿಭಟನೆಗಳು  ಟ್ವಿಟರ್‌ನಲ್ಲಿ ಪ್ರಾರಂಭವಾಗಿದ್ದು, ಇದೀಗ  ಹೆಚ್ಚಿನ ಒತ್ತು ಪಡೆದಿದೆ.  (ಎಸ್.ಎಚ್)

Leave a Reply

comments

Related Articles

error: