ಮೈಸೂರು

ಅಗಲಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕದ್ರಿ  ಗೋಪಾಲನಾಥ್ ಅವರಿಗೆ ಸಂತಾಪ ಸಲ್ಲಿಕೆ

ಮೈಸೂರು,ಅ.11:- ರಾಮಾನುಜ ರಸ್ತೆಯಲ್ಲಿರುವ ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್ ಶಾಲೆಯ ವತಿಯಿಂದ ಇಂದು ಅಗಲಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕದ್ರಿ  ಗೋಪಾಲನಾಥ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ  ಸಂತಾಪ ಸಲ್ಲಿಸಲಾಯಿತು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಮಾತನಾಡಿದ  ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಸ್ಯಾಕ್ಸೋಫೋನ್ ಮೂಲಕ ಪಸರಿಸಿ, ತಮ್ಮ ಜುಗಲ್ ಬಂದಿ ಗಾಯನ ಕಾರ್ಯಕ್ರಮಗಳಿಂದ ಲಕ್ಷಾಂತರ ಸಂಗೀತ ಅಭಿಮಾನಿಗಳ ಮನಗೆದ್ದ ಪದ್ಮಶ್ರೀ ಕದ್ರಿ  ಗೋಪಾಲನಾಥ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕದ್ರಿ ಗೋಪಾಲನಾಥ್ ಅವರು   ಮೈಸೂರಿಗೆ ವರ್ಷಕ್ಕೆ ಕನಿಷ್ಟ ಪಕ್ಷ ಎರಡು ಮೂರು ಬಾರಿ ಯಾದರೂ ಬಂದು ಸಂಗೀತ ಪ್ರೇಮಿಗಳಿಗೆ ಮತ್ತು ಅಭಿಮಾನಿಗಳಿಗೆ ರಸದೌತಣ ನೀಡುತ್ತಿದ್ದರು. ರಾಮಕೃಷ್ಣ ನಗರದ ಪರಮಹಂಸ ವೃತ್ತದಲ್ಲಿರುವ ಪರಮಹಂಸ ಪ್ರತಿಮೆ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿ ಸಂಗೀತ ಕಚೇರಿಯನ್ನು ನಡೆಸಿಕೊಟ್ಟಿದ್ದನ್ನು ಸ್ಮರಿಸಿದರು.

ಹಿರಿಯ ರಂಗಕರ್ಮಿ ಚಂದ್ರು ಮಾತನಾಡಿ ಅವರು ಕದ್ರಿ ಗೋಪಾಲನಾಥ್ ಅವರ ಸಂಗೀತ ಶ್ರದ್ಧೆ ಮತ್ತು ಅವರು ಸೃಷ್ಟಿಸಿದ ಹೊಸ ಹೊಸ ರಾಗಗಳು ಮತ್ತು ವಿವಿಧ ಮಜಲುಗಳ ಕುರಿತು ಸ್ಮರಿಸಿದರು. ಮೈಸೂರಿನಲ್ಲಿರುವ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಆಸ್ಥಾನ ವಿದ್ವಾನ್ ಕೂಡ ಆಗಿದ್ದರು. ಪ್ರತಿವರ್ಷ ಕಾರ್ಯಕ್ರಮಕ್ಕೆ ಕದ್ರಿ ಅವರು ಬಂದು ಸಂಗೀತ ಸೇವೆ ನಡೆಸಿಕೊಡುತ್ತಿದ್ದುದನ್ನು  ಮೈಕ್ ಚಂದ್ರು ಸ್ಮರಿಸಿದರು

ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್ ಶಾಲೆಯ ಶಿಕ್ಷಕರಾದ ರಾಘವೇಂದ್ರ ಪ್ರಸಾದ್ ,ಯುವ ಮುಖಂಡರಾದ ಜಯಸಿಂಹ ಶ್ರೀಧರ್ ,ಸುಚೀಂದ್ರ, ದುರ್ಗಾ ಪ್ರಸಾದ್ , ಗಣೇಶ್ ಪ್ರಸಾದ್ ಹಾಗೂ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: