ಕ್ರೀಡೆ

ದ್ವಿತೀಯ ಟೆಸ್ಟ್: 601/5ಕ್ಕೆ ಡಿಕ್ಲೇರ್ ಘೋಷಿಸಿದ ಭಾರತ

ಪುಣೆ,ಅ.11- ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 156.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 601 ರನ್‌ಗಳ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿದೆ.

ನಾಯಕ ವಿರಾಟ್ ಕೊಹ್ಲಿ ಭರ್ಜರಿ ದ್ವಿಶತಕ (254*), ಮಯಾಂಕ್ ಅಗರ್ವಾಲ್ (108), ರವೀಂದ್ರ ಜಡೇಜಾ (91),ಚೇತೇಶ್ವರ ಪೂಜಾರ (58) ಹಾಗೂ ಅಜಿಂಕ್ಯ ರಹಾನೆ (59) ರನ್ ಗಳ ನೆರವಿನಿಂದ ಭಾರತ 601 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.

ವಿರಾಟ್ ಕೊಹ್ಲಿ ದ್ವಿಶತಕ ಸಿಡಿಸುವ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಏಳನೇ ದ್ವಿಶತಕ ಸಿಡಿಸಿದರು. ರವೀಂದ್ರ ಜಡೇಜಾ ಅರ್ಧಶತಕ ಬಾರಿಸಿದರು. ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಜತೆಗೆ ಶತಕದ ನೀಡುವ ಮೂಲಕ ಭಾರತದ ಮೊತ್ತವನ್ನು 500ರ ಗಡಿ ದಾಟಿಸಿದರು.

ಟೀ ವಿರಾಮದ ಬಳಿಕವಂತೂ ಅಕ್ಷರಶ: ಟ್ವೆಂಟಿ-20 ಶೈಲಿಯಲ್ಲಿ ಕೊಹ್ಲಿ ಹಾಗೂ ಜಡೇಜಾ ಬ್ಯಾಟ್ ಬೀಸಿದರು. ದ್ವಿಶತಕದವರೆಗೆ ಒಂದೇ ಒಂದು ಸಿಕ್ಸ್ ಬಾರಿಸಿದೇ ಪರಿಪೂರ್ಣ ಟೆಸ್ಟ್ ಇನ್ನಿಂಗ್ಸ್ ಕಟ್ಟಿದ ವಿರಾಟ್ ಡಬಲ್ ಸೆಂಚುರಿ ಬೆನ್ನಲ್ಲೇ ಎರಡು ಸಿಕ್ಸರ್‌ಗಳನ್ನು ಸಿಡಿಸಿದರು. ಅಲ್ಲದೆ ಟೀ ವಿರಾಮದ ಬಳಿಕ 11 ಓವರ್‌ಗಳ ಅಂತರದಲ್ಲೇ ಶತಕದ ಜತೆಯಾಟವನ್ನು ನೀಡಿದರು. ಒಟ್ಟಾರೆಯಾಗಿ ಕೊಹ್ಲಿ ಹಾಗೂ ಜಡೇಜಾ ದ್ವಿಶತಕ ಜತೆಯಾಟ ನೀಡುವ ಮೂಲಕ ಬೃಹತ್ ಮೊತ್ತ ಪೇರಿಸಲು ನೆರವಾದರು.

ವಿರಾಟ್ ಕೊಹ್ಲಿ 250 ರನ್ ಸಾಧನೆಯನ್ನು ಮಾಡಿದರು. ಈ ಮೂಲಕ ಮಾಜಿ ಐಕಾನ್ ಸಚಿನ್ ತೆಂಡೂಲ್ಕರ್ ಜತೆಗೆ ತಮ್ಮದೇ ವೈಯಕ್ತಿಕ ಗರಿಷ್ಠ ರನ್ ದಾಖಲೆಯನ್ನು ಮುರಿದರು. ಈ ನಡುವೆ ರವೀಂದ್ರ ಜಡೇಜಾ ಕೇವಲ 9 ರನ್ ಅಂತರದ ಶತಕ ಮಿಸ್ ಮಾಡಿಕೊಂಡರು. ಇದರೊಂದಿಗೆ ಭಾರತ ಡಿಕ್ಲೇರ್ ಘೋಷಿಸಿತು.

104 ಎಸೆತಗಳನ್ನು ಎದುರಿಸಿದ ಜಡೇಜಾ ಎಂಟು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳಿಂದ 91 ರನ್ ಗಳಿಸಿದರು. ಅಲ್ಲದೇ ನಾಯಕ ವಿರಾಟ್ ಕೊಹ್ಲಿ ಜತೆಗೆ ಐದನೇ ವಿಕೆಟ್‌ಗೆ 225 ರನ್‌ಗಳ ಜತೆಯಾಟದಲ್ಲಿ ಭಾಗಿಯಾದರು.

ಅತ್ತ ಅಜೇಯ ಇನ್ನಿಂಗ್ಸ್ ಕಟ್ಟಿದ ಕೊಹ್ಲಿ 336 ಎಸೆತಗಳಲ್ಲಿ 33 ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 254 ರನ್ ಗಳಿಸಿ ಅಜೇಯರಾಗುಳಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಬ್ಯಾಟ್‌ನಿಂದ ದಾಖಲಾದ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ದಕ್ಷಿಣ ಆಫ್ರಿಕಾ ಪರ 196 ರನ್ ಬಿಟ್ಟುಕೊಟ್ಟ ಕೇಶರ್ ಮಹಾರಾಜ್ ಸಾಕಷ್ಟು ದುಬಾರಿಯೆನಿಸಿದರು. ಇನ್ನುಳಿದಂತೆ ಕಗಿಸೋ ರಬಡ ಮೂರು ವಿಕೆಟ್ ಕಬಳಿಸಿದರು.

ಊಟದ ವಿರಾಮದ ಬೆನ್ನಲ್ಲೇ ಉತ್ತಮವಾಗಿ ಆಡುತ್ತಿದ್ದ ಅಜಿಂಕ್ಯ ರಹಾನೆ ವಿಕೆಟ್ ಪತನವಾಯಿತು. ಇದರೊಂದಿಗೆ ಕೇಶವ್ ಮಹಾರಾಜ್ ಟೆಸ್ಟ್ ಕ್ರಿಕೆಟ್‌ನಲ್ಲಿ 100ನೇ ವಿಕೆಟ್ ಸಾಧನೆ ಮಾಡಿದರು. 27ನೇ ಟೆಸ್ಟ್ ಪಂದ್ಯದಲ್ಲಿ ಈ ಸ್ಮರಣೀಯ ದಾಖಲೆ ಬರೆದರು. ಇದರೊಂದಿಗೆ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ನಡುವಣ 178 ರನ್‌ಗಳ ಜತೆಯಾಟ ಮುರಿದು ಬಿತ್ತು. 168 ಎಸೆತಗಳನ್ನು ಎದುರಿಸಿದ ರಹಾನೆ ಎಂಟು ಬೌಂಡರಿಗಳಿಂದ 59 ರನ್ ಗಳಿಸಿದರು.

273/3 ಎಂಬಲ್ಲಿದ್ದ ದಿನದಾಟ ಆರಂಭಿಸಿದ ಟೀಮ್ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಎಚ್ಚರಿಕೆಯ ಆರಂಭವೊದಗಿಸಿದರು. (ಎಂ.ಎನ್)

 

Leave a Reply

comments

Related Articles

error: