ಪ್ರಮುಖ ಸುದ್ದಿ

ವೀರಾಜಪೇಟೆ ತಹಶೀಲ್ದಾರ್‌ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ

ರಾಜ್ಯ(ಮಡಿಕೇರಿ)ಅ.12:-  ವೀರಾಜಪೇಟೆ ತಹಶೀಲ್ದಾರ್‌ ಪುರಂದರ ಅವರು ತಮ್ಮ ಕಚೇರಿಯಲ್ಲೇ ಶುಕ್ರವಾರ ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ವೀರಾಜಪೇಟೆ ತಾಲೂಕು ತೂಚಮಕೇರಿಯ ನಿವಾಸಿ ಪಿ ಎಂ ನರೇಂದ್ರ ಎಂಬುವವರು ತಮ್ಮ ಜಮೀನನ್ನು ಭೂ ಪರಿವರ್ತನೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಕೆಲಸ ಮಾಡಿಕೊಡಲು ಸತಾಯಿಸುತ್ತಿದ್ದ ತಹಶೀಲ್ದಾರ್‌ ಅವರು ಸಿಬ್ಬಂದಿ ಜಾಗೃತ್‌ ಮೂಲಕ 15 ಸಾವಿರ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದರು. ಕೊನೆಗೆ 9 ಸಾವಿರ ರೂಪಾಯಿ ಕೊಡಲು ನರೇಂದ್ರ ಸಮ್ಮತಿಸಿದ್ದರು. ಇಂದು ಈ ಲಂಚದ ಮೊದಲ ಕಂತಾದ 2000 ರೂಪಾಯಿಗಳನ್ನು ತಮ್ಮ ಕಚೇರಿಯಲ್ಲೇ ಸ್ವೀಕರಿಸುತ್ತಿದ್ದಾಗ ಎಸಿಬಿ ಡಿವೈಎಸ್‌ಪಿ ಪೂರ್ಣಚಂದ್ರ ಹಾಗೂ ಇನ್ಸಪೆಕ್ಟರ್‌ ಮಂಜುನಾಥ್‌ ದಾಳಿ ನಡೆಸಿ ಬಂಧಿಸಿದ್ದಾರೆ. ಸಿಬ್ಬಂದಿ ಜಾಗೃತ್‌ ಎಂಬಾತನನ್ನೂ ಬಂಧಿಸಲಾಗಿದ್ದು ಮೊಕದ್ದಮೆ ದಾಖಲು ಮಾಡಿಕೊಂಡಿದ್ದು ತನಿಖೆ ನಡೆಯುತ್ತಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: