ಮೈಸೂರು

ಅಪ್ರಾಪ್ತ ವಯಸ್ಸಿನ ಬಾಲಕಿ ಅಪಹರಣ : ಯುವಕನ ಬಂಧನ

ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ವಿವಾಹವಾಗಿದ್ದ ಯುವಕನನ್ನು ಬಾಲ್ಯವಿವಾಹ ಕಾಯ್ದೆಯಡಿ ಬಂಧಿಸಿದ ಘಟನೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

ಬಂಧಿತನನ್ನು  ಅರೆಪುರ ಗ್ರಾಮದ ಮಹದೇವಯ್ಯನ ಮಗ ಪ್ರಸನ್ನಕುಮಾರ್ (24) ಎಂದು ಗುರುತಿಸಲಾಗಿದೆ. ಈತನನ್ನು ಬಿಳಿಗೆರೆ ಪೊಲೀಸರು ಪೋಕ್ಸೊ ಹಾಗೂ ಬಾಲ್ಯ ವಿವಾಹ ಕಾಯ್ದೆಯಡಿ ಬಂಧಿಸಿದ್ದಾರೆ.
ಆರೋಪಿ ಪ್ರಸನ್ನಕುಮಾರ್ ಕಳೆದ ವಾರ ಅಪ್ರಾಪ್ತ ಹುಡುಗಿಯೋರ್ವಳನ್ನು ಅಪಹರಿಸಿದ್ದು, ತಾಲೂಕಿನ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿತ್ತು, ಬಿಳಿಗೆರೆ ಠಾಣೆಯ ಪಿ.ಎಸ್.ಐ.ಸತೀಶ್ ಆರೋಪಿಯನ್ನು ವಶಕ್ಕೆ ಪಡೆದು ನಗರದ ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

Leave a Reply

comments

Related Articles

error: