ಪ್ರಮುಖ ಸುದ್ದಿಮೈಸೂರು

ಆಯತಪ್ಪಿ  ವರುಣಾ ನಾಲೆಗೆ ಬಿದ್ದು ಕೊಚ್ಚಿ ಹೋದ ಯುವಕ

ಮೈಸೂರು/ಶ್ರೀರಂಗಪಟ್ಟಣ, ಅ.12:-  ಯುವಕನೋರ್ವ ಬೃಂದಾವನ ರಸ್ತೆಯಲ್ಲಿರುವ ವರುಣಾ ನಾಲೆಯಲ್ಲಿ ಶುಕ್ರವಾರ ತಡರಾತ್ರಿ ಆಕಸ್ಮಿಕವಾಗಿ ಬಿದ್ದು   ನೀರಿನಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ.

ಮೈಸೂರಿನ ಕುವೆಂಪು ನಗರದ ಹುಡ್ಕೋ ಬಡಾವಣೆಯ ರಾಕೇಶ್ (24) ಎಂಬಾತನೇ ನೀರಿನಲ್ಲಿ ಕೊಚ್ಚಿ ಹೋದವ ಎನ್ನಲಾಗಿದ್ದು, ಶುಕ್ರವಾರ ರಾತ್ರಿ 11 ಗಂಟೆಯಲ್ಲಿ ಸ್ನೇಹಿತರ ಜತೆ ನಾಲೆ ಬಳಿ ಮಾತನಾಡುತ್ತ ಕುಳಿತಿದ್ದ ಈತ  ಆಯತಪ್ಪಿ  ನಾಲೆಗೆ ಬಿದ್ದ ಎನ್ನಲಾಗಿದೆ.

ಆತನ ಜತೆಗಿದ್ದ ಇಬ್ಬರು ಸ್ನೇಹಿತರು ಆತನನ್ನು ರಕ್ಷಿಸಲು ಯತ್ನಿಸಿದರಾದರೂ ನೀರಿನ ರಭಸ ಹೆಚ್ಚಾಗಿದ್ದರಿಂದ, ರಾಕೇಶ್​ ಕೊಚ್ಚಿ ಹೋಗಿದ್ದಾನೆ ಎನ್ನಲಾಗಿದೆ.

ಕೆ.ಆರ್.ಸಾಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: