ಮೈಸೂರು

ಜಾನುವಾರುಗಳಿಗೆ ಮೇವು ವಿತರಿಸುವ ಮೂಲಕ ಬಿಎಸ್ ವೈ ಜನ್ಮದಿನ ಆಚರಣೆ

ಫೆ.27ರಂದು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಜನ್ಮದಿನಾಚರಣೆ ನಡೆಯಲಿದ್ದು,  ಬಿಜೆಪಿ  ಕಾರ್ಯಕರ್ತರು  ಒಂದು ದಿನ ಮುಂಚಿತವಾಗಿಯೇ ಜಾನುವಾರುಗಳಿಗೆ ಮೇವನ್ನು ನೀಡುವ ಮೂಲಕ  ಯಡಿಯೂರಪ್ಪನವರ ಜನ್ಮದಿನವನ್ನು ಆಚರಿಸುತ್ತಿದ್ದಾರೆ.

ಮೈಸೂರಿಗೆ ಇತ್ತೀಚೆಗೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಕಾರ್ಯಕರ್ತರು, ಹಾಗೂ ಅನುಯಾಯಿಗಳು, ಬೆಂಬಲಿಗರು ಯಾರೂ ನನ್ನ ಜನ್ಮದಿನದ ಹೆಸರಿನಲ್ಲಿ ಅನಗತ್ಯ ಖರ್ಚುಗಳನ್ನು ಮಾಡಬೇಡಿ. ರಾಜ್ಯ  ಬರದಿಂದ ಕಂಗೆಟ್ಟಿದೆ. ಜಾನುವಾರುಗಳಿಗೆ ಮೇವಿಲ್ಲವಾಗಿದೆ. ನನ್ನ ಜನ್ಮದಿನ ಆಚರಿಸುವವರು ಜಾನುವಾರುಗಳಿಗೆ ಮೇವನ್ನು ನೀಡಿ ಎಂಬ ಸಲಹೆಯನ್ನು ನೀಡಿದ್ದರು. ಯಡಿಯೂರಪ್ಪನವರ ಸಲಹೆಯನ್ನು ಪಾಲಿಸಿದ ಬಿಜೆಪಿ ಕಾರ್ಯಕರ್ತರು ಮೈಸೂರಿನ ಬೋಗಾದಿಯ ಗದ್ದುಗೆನಾಯಕನ ರಸ್ತೆಯಲ್ಲಿರುವ ಶೆಟ್ಟನಾಯಕನ ಹಳ್ಳಿಯ ಜಾನುವಾರುಗಳಿಗೆ ಮೇವನ್ನು ವಿತರಿಸಿದರು.

ಬಿಜೆಪಿಯ ನೂರಾರು ಕಾರ್ಯಕರ್ತರು ಈ ಸಂದರ್ಭ ಪಾಲ್ಗೊಂಡಿದ್ದರು.

Leave a Reply

comments

Related Articles

error: