ಪ್ರಮುಖ ಸುದ್ದಿ

ಚೆನ್ನೈ ಮಾತುಕತೆ ಭಾರತ-ಚೀನಾ ಸಂಬಂಧದ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತದೆ : ಪ್ರಧಾನಿ ಮೋದಿ

ದೇಶ(ನವದೆಹಲಿ)ಅ.12:-  ಚೆನ್ನೈ ಮಾತುಕತೆ ಭಾರತ-ಚೀನಾ ಸಂಬಂಧದ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತದೆ ಎಂದು ಪ್ರಧಾನಿ ಮೋದಿ ಕ್ಸಿ ಜಿನ್‌ಪಿಂಗ್‌ಗೆ ತಿಳಿಸಿದ್ದಾರೆ.

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಎರಡನೇ ಅನೌಪಚಾರಿಕ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಅವರ ನಡುವಿನ ಮಾತುಕತೆ ಭಾರತ-ಚೀನಾ ಸಹಕಾರಕ್ಕೆ ಹೊಸ ನಿರ್ದೇಶನ ನೀಡುತ್ತದೆ ಎಂದು ಹೇಳಿದ್ದಾರೆ. ಕಳೆದ 2000 ವರ್ಷಗಳಿಂದ ಭಾರತ-ಚೀನಾ ವಿಶ್ವದ ಆರ್ಥಿಕ ಶಕ್ತಿಯಾಗಿದ್ದು, ನಾವು ಮತ್ತೆ ವಿಶ್ವದ ಆರ್ಥಿಕ ಶಕ್ತಿಯಾಗುತ್ತೇವೆ ಎಂದು ಹೇಳಿದ್ದಾರೆ. ಭಾರತ ಮತ್ತು ಚೀನಾ ನಡುವೆ ಹೊಸ ಅಧ್ಯಾಯವನ್ನು ಪ್ರಾರಂಭಿಸುವ ಆಶಯದೊಂದಿಗೆ ಪ್ರಧಾನಿ ಮೋದಿ ಚೆನ್ನೈಯನ್ನು ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಸಾಕ್ಷಿಯೆಂದು ಬಣ್ಣಿಸಿದ್ದಾರೆ.

ಮತ್ತೊಂದೆಡೆ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ತಮ್ಮ ಭಾರತ ಭೇಟಿಯನ್ನು ಸ್ಮರಣೀಯ ಎಂದು ವಿವರಿಸಿ, ಇಲ್ಲಿ ನೀವು ನೀಡಿದ ಸ್ವಾಗತ ಸಂತೋಷ ತಂದಿದೆ ಎಂದಿದ್ದು,  ಭಾರತದೊಂದಿಗೆ ಸಂವಾದವನ್ನು ಇನ್ನಷ್ಟು ಮುಂದುವರೆಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ಈ ಅನೌಪಚಾರಿಕ ಸಂವಾದವು ಸಂಬಂಧಕ್ಕೆ ಉತ್ತೇಜನ ನೀಡಿದೆ ಎಂದು ಹೇಳಿದ್ದಾರೆ.

ಇಂದು  ಬೆಳಿಗ್ಗೆ ಕೋವಲಂನ ತಾಜ್  ಫಿಶರ್ ಮೆನ್  ಹೋಟೆಲ್‌ನ ಕೋವ್ ರೆಸಾರ್ಟ್‌ನಲ್ಲಿ ಪಿಎಂ ನರೇಂದ್ರ ಮೋದಿ ಮತ್ತು ನರೇಂದ್ರ ಜಿನ್‌ಪಿಂಗ್  ಉಭಯ ನಾಯಕರ ನಡುವಿನ ಸಭೆ ಸುಮಾರು ಒಂದು ಗಂಟೆ ಕಾಲ ನಡೆಯಿತು, ನಂತರ ಉಭಯ ದೇಶಗಳ ನಿಯೋಗದ ನಡುವೆ ಮಾತುಕತೆ ನಡೆಯಿತು.

ಪ್ರಧಾನಿ ನರೇಂದ್ರ ಮೋದಿ ಅವರು, ಭಾರತ-ಚೀನಾ ಪರಸ್ಪರ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಬೇಕಿದೆ ಎಂದರು.     ನಾವು ನಮ್ಮ ಭಿನ್ನಾಭಿಪ್ರಾಯಗಳನ್ನು ವಿವೇಕದಿಂದ ನಿರ್ವಹಿಸಲು ಹಾಗೂ ಅವುಗಳನ್ನು ವಿವಾದಗಳಾಗಿ ಪರಿವರ್ತಿಸಲು ಬಿಡದಿರಲು ನಿರ್ಧರಿಸಿದ್ದೇವೆ. ನಮ್ಮ ಕಾಳಜಿ ಬಗ್ಗೆ ನಾವು ಅತ್ಯಂತ ಸೂಕ್ಷ್ಮತೆಯಿಂದಿರುತ್ತೇವೆ. ಉಭಯ ರಾಷ್ಟ್ರಗಳ ಸಂಬಂಧ ವಿಶ್ವದ ಶಾಂತಿ ಮತ್ತು ಸ್ಥಿರತೆಗೆ ಕೊಡುಗೆ ನೀಡುತ್ತದೆ ಎಂದು ತಿಳಿಸಿದ್ದಾರೆ.

ಬಳಿಕ ಮಾತನಾಡಿರುವ ಚೀನಾ ಅಧ್ಯಕ್ಷ ಕ್ಸಿಜಿನ್’ಪಿಂಗ್ ಅವರು, ನೀವು ಹೇಳಿದಂತೆ ನಾವು ಸ್ನೇಹಿತರಂತೆ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಹೃದಯಪೂರ್ವಕವಾಗಿ ಚರ್ಚೆಗಳಲ್ಲಿ ತೊಡಗಿದ್ದೆವು. ಇದು ನಮಗೆ ಮರೆಯಲಾಗದ ಅನುಭವವನ್ನು ನೀಡಿದೆ ಎಂದು ತಿಳಿಸಿದ್ದಾರೆ.

ನಿಯೋಗ ಮಟ್ಟದ ಮಾತುಕತೆ ವೇಳೆ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್, ಎನ್‌ಎಸ್‌ಎ ಅಜಿತ್ ದೋವಲ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ  ಸೇರಿದಂತೆ 8ಮಂದಿ ತಂತ್ರಜ್ಞರು ಪ್ರಧಾನಿ ಜೊತೆ ಪಾಲ್ಗೊಂಡಿದ್ದಾರೆ.  (ಎಸ್.ಎಚ್)

Leave a Reply

comments

Related Articles

error: