ದೇಶ

ಬಂಗಾಳದಲ್ಲಿನ ತ್ರಿವಳಿ ಕೊಲೆ ಪ್ರಕರಣ: ಪ್ರಕಾಶ್ ಪಾಲ್ ಆರ್ ಎಸ್ಎಸ್ ಕಾರ್ಯಕರ್ತನಲ್ಲ; ಕುಟುಂಬಸ್ಥರಿಂದ ಸ್ಪಷ್ಟನೆ

ಕೋಲ್ಕತ್ತಾ,.12- ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಜಿಯಾಗಂಜ್ ಪಟ್ಟಣದಲ್ಲಿ ನಡೆದ ತ್ರಿವಳಿ ಕೊಲೆಯಲ್ಲಿ ಸಾವನ್ನಪ್ಪಿದ ಪ್ರಕಾಶ್ ಪಾಲ್ ಆರ್ ಎಸ್ಎಸ್ ಕಾರ್ಯಕರ್ತನಲ್ಲ ಎಂದು ಕುಟುಂಬಸ್ಥರು ಸ್ಪಷ್ಟಪಡಿಸಿದ್ದಾರೆ.

ಪ್ರಕಾಶ್ ಪಾಲ್ ಯಾವುದೇ ರಾಜಕೀಯ ಪಕ್ಷ ಸಂಘಟನೆಯ ಜತೆ ನಂಟು ಹೊಂದಿಲ್ಲ ಎಂದು ಸ್ಪಷ್ಟಪಡಿಸಿರುವುದಲ್ಲದೆ, ಪ್ರಕರಣದ ರಾಜಕೀಯ ಲಾಭ ಪಡೆಯಲೆತ್ನಿಸುತ್ತಿರುವ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದೆ.

ಆತ ಒಂದು ಬಿಳಿ ಕಾಗದದಂತಿದ್ದ. ಆತ ಬಿಜೆಪಿ ಸದಸ್ಯನೆಂದು ನಿಮಗೆ ಯಾರು ಹೇಳಿದ್ದು?, ಆತ ಯಾವತ್ತೂ ಬಿಜೆಪಿ ಅಥವಾ ತೃಣಮೂಲ ಕಾಂಗ್ರೆಸ್ ಜತೆ ಸಂಬಂಧ ಹೊಂದಿರಲಿಲ್ಲ. ಆತ ಯಾವತ್ತೂ ಆರ್ ಎಸ್ಎಸ್ ಜತೆಗಿರಲಿಲ್ಲ. ಸುಳ್ಳನ್ನು ಹರಡಲಾಗುತ್ತಿದೆ ಎಂದು ಪ್ರಕಾಶ್ ಪಾಲ್ ತಾಯಿ ಮಾಲಾ ಪಾಲ್ ಹೇಳಿದ್ದಾರೆ.

ಮಂಗಳವಾರ ಪ್ರಕಾಶ್ ಪಾಲ್, ಗರ್ಭಿಣಿ ಪತ್ನಿ ಹಾಗೂ ಪುತ್ರನ ಕೊಲೆಯಾಗಿದೆ. ಪ್ರಕಾಶ್ ಪಾಲ್ ಆರ್ ಎಸ್ಎಸ್ ಕಾರ್ಯಕರ್ತನಾಗಿದ್ದ ಎಂದು ಬಿಜೆಪಿ ಪ್ರತಿಪಾದಿಸಿದ ನಂತರ ಈ ಪ್ರಕರಣ ರಾಜಕೀಯ ಬಣ್ಣ ಪಡೆದುಕೊಂಡಿತ್ತು. ಈ ಮೂರು ಕೊಲೆಗಳ ಸಂಬಂಧ ಪೊಲೀಸರು ನಾಲ್ಕು ಮಂದಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರೂ ನಂತರ ಇಬ್ಬರನ್ನು ಬಿಡುಗಡೆಗೊಳಿಸಿದ್ದರು.

ವೈಯಕ್ತಿಕ ವೈಷಮ್ಯ ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದರೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಬಿಜೆಪಿ ರಾಜ್ಯ ಸರ್ಕಾರವನ್ನು ದೂರಿದೆ. ಅತ್ತ ಟಿಎಂಸಿ ಆತ ಬಿಜೆಪಿ ಒಳಜಗಳದ ಬಲಿಪಶು ಎಂದು ಹೇಳಿಕೊಂಡಿದೆ. (ಎಂ.ಎನ್)

Leave a Reply

comments

Related Articles

error: