ಸುದ್ದಿ ಸಂಕ್ಷಿಪ್ತ

ನಗರದಲ್ಲಿ ನಾಳೆ ರೈತ ಜಾಥಾ ವಾಹನ

ಮೈಸೂರು,ಅ.12 : ತಲಕಾವೇರಿಯಿಂದ ಆಗಮಿಸುತ್ತಿರುವ ರೈತ ವಾಹನ ಜಾಥಾವು ದಿ.13ರ ಬೆಳಗ್ಗೆ 10.30ಕ್ಕೆ ನೂರಡಿ ರಸ್ತೆ, ಗನ್ ಹೌಸ್, ಹಾರ್ಡಿಂಗ್ ಸರ್ಕಲ್ ಮೂಲಕ ಟೌನ್ ಹಾಲ್ ತಲುಪಿ ಅಲ್ಲಿ ಬಹಿರಂಗ ಸಭೆ ನಡೆಯಲಿದೆ.

ಸಭೆಯಲ್ಲಿ ಸಾಹಿತಿಗಳು, ಹೋರಾಟಗಾರರು ಭಾಗಿಯಾಗಿ ಮಾತನಾಡುವರು ನಂತರ ಶ್ರೀರಂಗಪಟ್ಟಣದತ್ತ ಜಾಥಾ ತೆರಳಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.(ಕೆ.ಎಂ.ಆರ್)

Leave a Reply

comments

Related Articles

error: