ಸುದ್ದಿ ಸಂಕ್ಷಿಪ್ತ

ಬ್ರಾಹ್ಮಣ ವಧು-ವರರ ಸಮಾವೇಶ ನಾಳೆ

ಮೈಸೂರು,ಅ.12 : ಕೃಷ್ಣಧಾಮ, ತುಳು ಶಿವಳ್ಳಿ ಮಾಧ್ವ ಮಹಾಮಂಡಲ, ಸಪ್ತಪದಿ ಫೌಂಡೇಷನ್ ಟ್ರಸ್ಟ್ ಹಾಗೂ ಇತರ ಸಂಘಟನೆಗಳ ಸಹಯೊಗದಲ್ಲಿ 28ನೇ ರಾಜ್ಯಮಟ್ಟದ ಬೃಹತ್ ಬ್ರಾಹ್ಮಣ ವಧು-ವರಾನ್ವೇಷನಾ ಸಮಾವೇಶವನ್ನು ಅ.13ರ ಬೆಳಗ್ಗೆ 11.30 ರಿಂದ ಸರಸ್ವತಿಪುರಂನ ಶ್ರೀಕೃಷ್ಣಧಾಮದಲ್ಲಿ ಏರ್ಪಡಿಸಲಾಗಿದೆ.

ಇಳೈ ಆಳ್ವಾರ್ ಸ್ವಾಮೀಜಿ, ಡಾ.ಭಾನುಪ್ರಕಾಶ್ ಶರ್ಮ, ಡಾ.ಮೈ,ಕುಮಾರ್ ಸಾನಿಧ್ಯ. ಖಾಸಗಿ ವಾಹಿನಿ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ರವಿ, ಪಿ.ಜಯರಾಂ ಭಟ್, ಜೆ.ಎಲ್.ಅನಂತತಂತ್ರಿ, ರವಿಶಾಸ್ತ್ರಿ, ಹಾಗೂ ಇತರರು ಹಾಜರಿರಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: