Uncategorized

ವಾಣಿಜ್ಯ ಶಾಲೆ ಪ್ರಾರಂಭಕ್ಕೆ ಅರ್ಜಿ ಆಹ್ವಾನ

ಬೆಂಗಳೂರು (ಅ.12): 2019-20ನೇ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕ ರಾಜ್ಯದಾದ್ಯಂತ ಹೊಸದಾಗಿ ವಾಣಿಜ್ಯ (ಬೆರಳಚ್ಚು ಹಾಗೂ ಶೀಘ್ರಲಿಪಿ) ಶಾಲೆಗಳನ್ನು ಹಾಗೂ ಗಣಕಯಂತ್ರ ಶಿಕ್ಷಣ ಶಾಲೆಗಳನ್ನು ಪ್ರಾರಂಭಿಸಲು ಅಕ್ಟೋಬರ್ 31 ರ ವರೆಗೆ ಬೆಂಗಳೂರು ವಿಭಾಗಕ್ಕೆ ಸಂಬಂಧಪಟ್ಟಂತೆ ಸಹ ನಿರ್ದೇಶಕರು-1 ಬೆಂಗಳೂರು ವಿಭಾಗ, ಆಯುಕ್ತರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ನೃಪತುಂಗ ರಸ್ತೆ, ಕೆ.ಆರ್. ವೃತ್ತ, ಬೆಂಗಳೂರು ಇವರಿಗೆ ಅರ್ಜಿ ಸಲ್ಲಿಸುವುದು.

ಕಲಬುರಗಿ ವಿಭಾಗಕ್ಕೆ ಸಂಬಂಧಪಟ್ಟಂತೆ ಸಹ ನಿರ್ದೇಶಕರು, ಅಪರ ಆಯುಕ್ತರ ಕಚೇರಿ, ಕಲಬುರಗಿ, ಇವರಿಗೆ ಬೆಳಗಾವಿ, ಹಾಗೂ ಮೈಸೂರು ವಿಭಾಗಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯಾ ವಿಭಾಗದ ಸಹ ನಿರ್ದೇಶಕರಿಗೆ ಅರ್ಜಿಯನ್ನು ಸಲ್ಲಿಸುವುದು.

ರಾಜ್ಯದಲ್ಲಿನ ಎಲ್ಲಾ ಅಂಗೀಕೃತ ವಾಣಿಜ್ಯ ಶಾಲೆಗಳಲ್ಲಿ ಪ್ರಸ್ತುತ ನಡೆಸಲಾಗುತ್ತಿರುವ ಬೆರಳಚ್ಚು/ಶೀಘ್ರಲಿಪಿ ಜೊತೆಗೆ ಕಂಪ್ಯೂಟರ್ ಶಿಕ್ಷಣ ಅಳವಡಿಸಿಕೊಳ್ಳಲು ಸರ್ಕಾರ 2006 ರಲ್ಲಿ  ಆದೇಶಿಸಿದ್ದು, ಅದರಂತೆ ಅರ್ಜಿ ಸಲ್ಲಿಸುವುದು.

ಹೆಚ್ಚಿನ ಮಾಹಿತಿಗೆ www.schooleducation.kar.nic.in – secondary education commerce education ದಲ್ಲಿ ಪರಿಶೀಲಿಸುವುದು. ಹಾಗೂ ಹಿರಿಯ ಸಹಾಯಕ ನಿರ್ದೇಶಕರು, (ವಾಣಿಜ್ಯ) ಆಯುಕ್ತರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ನೃಪತುಂಗ ರಸ್ತೆ, ಬೆಂಗಳೂರು ಇವರನ್ನು ಸಂಪರ್ಕಿಸಲು ತಿಳಿಸಲಾಗಿದೆ.

(ಎನ್.ಬಿ)

Leave a Reply

comments

Related Articles

error: