ಸುದ್ದಿ ಸಂಕ್ಷಿಪ್ತ

ಅಕ್ಟೋಬರ್ 14 ರಿಂದ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ

ಮಂಡ್ಯ (ಅ.12): ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಮಂಡ್ಯ ಹಾಗೂ ಹಾಲು ಒಕ್ಕೂಟ (ಮನ್ ಮುಲ್) ಇವರ ಸಹಕಾರದೊಂದಿಗೆ ಅಕ್ಟೋಬರ್ 14 ರಿಂದ ನವೆಂಬರ್4 ರವರೆಗೆ ಜಿಲ್ಲೆಯಾದ್ಯಂತ ಎಲ್ಲಾ ದನ, ಎಮ್ಮೆ ಹಾಗೂ ಹಂದಿಗಳಿಗೆ ಉಚಿತವಾಗಿ ಪಲ್ಸ್ ಪೋಲಿಯೋ ಮಾದರಿಯಲ್ಲಿ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಇದು 16 ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮವಾಗಿದ್ದು, ಗ್ರಾಮವಾರು ದಿನಾಂಕಗಳನ್ನು ಸಂಬಂಧಪಟ್ಟ ತಾಲ್ಲೂಕು ಪಶುವೈದ್ಯ ಆಸ್ಪತ್ರೆಗಳು, ಪಶುಚಿಕಿತ್ಸಾಲಯ, ಗ್ರಾಮ ಪಂಚಾಯಿತಿ ಹಾಗೂ ಎಂ.ಪಿ.ಸಿ.ಎಸ್ ಗಳಲ್ಲಿ ಮುಂಚಿತವಾಗಿ ಪ್ರಕಟಿಸಲಾಗುವುದು. ಸಕ್ರಿಯವಾಗಿ ಭಾಗವಹಿಸಿ ರಾಸುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವುದರ ಮೂಲಕ ಜಾನುವಾರುಗಳನ್ನು ರಕ್ಷಿಸಿ ಕೊಳ್ಳಬೇಕು ಎಂದು ತಿಳಿಸಲಾಗಿದೆ.

(ಎನ್.ಬಿ)

Leave a Reply

comments

Related Articles

error: