ಮೈಸೂರು

ಪ್ರಜಾಪ್ರಭುತ್ವ ಗಟ್ಟಿಗೊಂಡಾಗ ಸಂಸ್ಕೃತಿ ಉಳಿಯಲಿದೆ : ಪ್ರೊ.ಕೆ.ಎಸ್.ಭಗವಾನ್

ದೇಶದ ಸಂಸ್ಕೃತಿ ವಿನಾಶಕ್ಕೆ ಸೇರಲ್ಪಡುತ್ತಿದ್ದು, ದೇಶದ ಸಂಸ್ಕೃತಿ ಉಳಿಯಲು ನಮ್ಮಲ್ಲಿರುವ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿಕೊಳ್ಳಬೇಕು ಎಂದು ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಹೇಳಿದರು.

ಮೈಸೂರು ಅರಮನೆ ಉತ್ತರ ದ್ವಾರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ದೇಸಿರಂಗ ಸಾಂಸ್ಕೃತಿಕ ಸಂಸ್ಥೆ ಸಹಕಾರದಲ್ಲಿ ಭಾನುವಾರ ಏರ್ಪಡಿಸಿದ್ದ ದೇಸಿರಂಗ ನಾಟಕೋತ್ಸವ ಮತ್ತು ವಿಚಾರ ಸಂಕಿರಣವನ್ನು ಕೆ.ಎಸ್.ಭಗವಾನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ದೇಶದ ಪ್ರಜಾಪ್ರಭುತ್ವ ಪದ್ಧತಿಗೆ ಜಾತಿ ಪದ್ಧತಿ ಮತ್ತು ಮತಾಂಧತೆ ವಿರುದ್ಧವಾಗಿದೆ. ಆದರೂ ನಾವು ಜಾತಿ ಪದ್ಧತಿಯನ್ನು ಪ್ರಜಾ ಪ್ರಭುತ್ವದೊಂದಿಗೆ  ಸಮ್ಮತಿಸಿದ್ದು ಬದುಕಿನ ಅವಿಭಾಜ್ಯ ಅಂಗಗಳಲ್ಲಿ ಅಳವಡಿಸಿಕೊಂಡು ಸಾಗುತ್ತಿದ್ದೇವೆ ಎಂದು ತಿಳಿಸಿದರು.

ಚಿಂತಕ ಜಿ.ಪಿ.ಬಸವರಾಜು, ಹೋರಾಟಗಾರ ಕೆ.ಸಿ.ವಾಸುದೇವನ್ , ಚಿಂತಕ ಡಾ.ವಿ.ಲಕ್ಷ್ಮೀನಾರಾಯಣ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮತ್ತು ಲೇಖಕ ಕೃಷ್ಣಜನಮನ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: