ಪ್ರಮುಖ ಸುದ್ದಿ

ಮೂರ್ನಾಡು ಕೊಡವ ಸಮಾಜ ಮಣಿಸಿದ ನಾಪೋಕ್ಲು ಕೊಡವ ಸಮಾಜ

ರಾಜ್ಯ(ಮಡಿಕೇರಿ)ಅ.13:- ಬಾಳುಗೋಡುವಿನಲ್ಲಿ ಕೊಡವ ಸಮಾಜಗಳ ಒಕ್ಕೂಟದ ಅಧಿನದಲ್ಲಿ ಕೊಡವ ಸಮಾಜಗಳ ನಡುವೆ ನಡೆಯುತ್ತಿರುವ ಹಾಕಿ ಪಂದ್ಯಾಟದಲ್ಲಿ ವಿರಾಜಪೇಟೆ ಕೊಡವ ಸಮಾಜ ಹಾಗೂ ನಾಪೋಕ್ಲು ಕೊಡವ ಸಮಾಜಗಳ ನಡುವೆ ಫೈನಲ್ಸ್ ಪಂದ್ಯಾಟ ಇಂದು ನಡೆಯಿತು.

ಶನಿವಾರ ನಡೆದ ಪ್ರಥಮ ಸೆಮಿ ಫೈನಲ್ಸ್‍ನಲ್ಲಿ ವಿರಾಜಪೇಟೆ ಕೊಡವ ಸಮಾಜ ತಂಡ 6-0 ಗೋಲುಗಳಿಂದ ಮೈಸೂರು ಕೊಡವ ಸಮಾಜ ತಂಡವನ್ನು ನಿರಾಯಾಸವಾಗಿ ಪರಾಭವ ಗೊಳಿಸಿತು. ವಿರಾಜಪೇಟೆ ಪರ ಶರತ್ (2ನಿ), ತಿಮ್ಮಣ್ಣ (8ನಿ), ಮುದ್ದಪ್ಪ(13ನಿ), ಪೊನ್ನಣ್ಣ(20ನಿ),ಸೋಮಯ್ಯ(21ನಿ),  ಸೋಮಣ್ಣ(27ನಿ)ದಲ್ಲಿ ಗೋಲು ದಾಖಲಿಸಿದರು.

ವಿರಾಜಪೇಟೆ ಪರ ಅಂತರಾಷ್ಠ್ರಿಯ ಆಟಗಾರ ಚೆಂದಂಡ ನಿಕಿನ್ ತಿಮ್ಮಯ್ಯ, ಏಕಲವ್ಯ ಪ್ರಶಸ್ತಿ ವಿಜೇತ ಕರಿನರವಂಡ ಸೋಮಣ್ಣ, ಇಂಡಿಯನ್ ಕ್ಯಾಂಪರ್ ಕುಪ್ಪಂಡ ಸೋಮಯ್ಯ, ಮಾಳೇಟಿರ ಮುದ್ದಪ್ಪ, ಪುಲಿಯಂಡ ತಿಮ್ಮಣ್ಣ ಉತ್ತಮ ಆಟ ಪ್ರದರ್ಶಿಸಿದರು.

ನಾಪೋಕ್ಲು ಕೊಡವ ಸಮಾಜ4-0 ಗೋಲುಗಳಿಂದ  ಮೂರ್ನಾಡು ಕೊಡವ ಸಮಾಜವವನ್ನು ಮಣಿಸಿತು. ನಾಪೋಕ್ಲು ಪರ ಅಪ್ಪನ್ಣ(5,11ನಿ), ಅಪ್ಪಣ್ಣ(54,60ನಿ)ದಲ್ಲಿ ಗೋಲು ದಾಖಲಿಸಿ ತಂಡಕ್ಕೆ ಜಯ ತಂದು ಕೊಟ್ಟರು.

ತೀರ್ಪುಗಾರರಾಗಿ ಚ್ಯೆಯ್ಯಂಡ ಅಪ್ಪಚ್ಚು, ಚೋಯಮಾಡಂಡ ಚಂಗಪ್ಪ, ಚಂದಪಂಡ ಆಕಾಶ್, ಕೋಡಿಮಣಿಯಂಡ ಗಣಪತಿ, ತಾಂತ್ರಿಕ ಸಮಿತಿಯಲ್ಲಿ ಕುಪ್ಪಂಡ ದಿಲನ್ ಬೋಪಣ್ಣ, ಕರವಂಡ ಅಪ್ಪಣ್ಣ, ಅಪ್ಪಚೆಟ್ಟೋಳಂಡ ಅಯ್ಯಪ್ಪ ಕಾರ್ಯ ನಿರ್ವಹಿಸಿದರು.

ಭಾರದ ಗುಂಡು ಎಸೆತ: ಪುರುಷರ ಭಾರದ ಗುಂಡು ಎಸೆತದಲ್ಲಿ ವಿರಾಜಪೇಟೆ ಕೊಡವ ಸಮಾಜದ ಮಾತಂಡ ರನ್ನು(ಪ್ರ), ನಾಪೋಕ್ಲು ಕೊಡವ ಸಮಾಜದ ಬಾಚಮಂಡ ಲವ ಚಿಣ್ಣಪ್ಪ(ದ್ವಿ), ಬೆಂಗಳೂರು ಕೊಡವ ಸಮಾಜದ ಬೊಳ್ಳಂಡ ರೋಷನ್(ತೃ). ಮಹಿಳೆಯ ವಿಭಾಗದಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಬೊಪ್ಪಂಡ ಕುಸುಮಾ, ಮಡಿಕೇರಿ ಕೊಡವ ಸಮಾಜದ ಕೆಚ್ಚೇಟಿರ ರೇಷ್ಮಾ ದೇಚಮ್ಮ(ದ್ವಿ), ವಿರಾಜಪೇಟೆ ಕೊಡವ ಸಮಾಜದ ಮನಿಯಪಂಡ ದೇಚಮ್ಮ ಕಾಳಪ್ಪ(ತೃ) ಸ್ಥಾನ ಪಡೆದುಕೊಂಡರು.

ಪುರಷರ ಹಾಗೂ ಮಹಿಳೆಯ ಹಗ್ಗಜಗ್ಗಾಟ ಫೈನಲ್ಸ್ ಪಂದ್ಯಾಟ ಇಂದು ನಡೆಯಿತು. ಪುರುಷರ ವಿಭಾಗದಲ್ಲಿ ನಾಪೋಕ್ಲು ಕೊಡವ ಸಮಾಜ ಹಾಗೂ ವಿರಾಜಪೇಟೆ ಕೊಡವ ಸಮಾಜ, ಮಹಿಳೆಯ ವಿಭಾಗದಲ್ಲಿ ಮಡಿಕೇರಿ ಕೊಡವ ಸಮಾಜ ಹಾಗೂ ನಾಪೋಕ್ಲು ಕೊಡವ ಸಮಾಜಗಳ ನಡುವೆ ನಡೆದಿದೆ.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: