ಮೈಸೂರು

ಚಿನ್ನಾಭರಣ ಕಳುವು ಪ್ರಕರಣ : ಮನೆಕೆಲಸದಾಕೆಯ ಬಂಧನ; ಚಿನ್ನಾಭರಣ ವಶ

ಮೈಸೂರು ನಗರ ವಿ.ವಿ.ಪುರಂ ಠಾಣಾ ವ್ಯಾಪ್ತಿಯಲ್ಲಿನ ಮನೆಯೊಂದರಲ್ಲಿ ಚಿನ್ನಾಭರಣವನ್ನು ಕಳುವು ಮಾಡಿದ್ದ ಮನೆಕೆಲಸದಾಕೆಯನ್ನು ಬಂಧಿಸಿ,  ಆಕೆಯಿಂದ 8ಲಕ್ಷರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತಳನ್ನು ಒಂಟಿಕೊಪ್ಪಲು  ವಿ.ಆರ್.ಸಿ ಕ್ವಾಟ್ರಸ್ ನಿವಾಸಿ ಲತಾ (32) ಎಂದು ಗುರುತಿಸಲಾಗಿದೆ. ಯಾದವಗಿರಿ ಒಂದನೇ ಮೇನ್ ನ ಮನೆ.ನಂ.42ರಲ್ಲಿ ಮಾಲೀಕರು ವಿವಿಪುರಂ ಪೊಲೀಸ್ ಠಾಣೆಗೆ ದೂರು  ಮನೆಯಲ್ಲಿ ಚಿನ್ನಾಭರಣ ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ್ದರು. ಈ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು ಮನೆಕೆಲಸದಾಕೆಯನ್ನು ವಿಚಾರಣೆ ನಡೆಸಿದ್ದರು. ಆಗಾಗ್ಗೆ  ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವ ಕುರಿತು ತಿಳಿಸಿದ ಮೇರೆಗೆ ಈಕೆಯನ್ನು ದಸ್ತಗಿರಿ ಮಾಡಿ ಈಕೆಯಿಂದ ರೂ. 8,54,400 ಬೆಲೆಯ 262 ಗ್ರಾಂ ಚಿನ್ನಾಭರಣ ಮತ್ತು 7 ಗ್ರಾಂ ತೂಕದ ವಜ್ರದ ಆಭರಣವನ್ನು ವಶಪಡಿಸಿಕೊಂಡಿದ್ದಾರೆ.

ಪತ್ತೆ ಕಾರ್ಯಾಚರಣೆಯಲ್ಲಿ  ವಿ.ವಿ.ಪುರಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಸಿ.ವಿ ರವಿ.  ಪಿ.ಎಸ್.ಐ ಗಳಾದ  ರಾಜು ಮತ್ತು ಅರ್ಕೇಶ್ವರ, ಎ.ಎಸ್.ಐ ಶಿವರಾಮು  ಹಾಗೂ ಸಿಬ್ಬಂದಿಗಳಾದ ಸೋಮಶೇಖರ್. ಪ್ರಸನ್ನ ಪಾಲ್ಗೊಂಡಿದ್ದರು.

Leave a Reply

comments

Related Articles

error: