ಮೈಸೂರು

ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಮುಖ್ಯ

ಜೆಎಸ್ಎಸ್ ಕಾನೂನು ವಿದ್ಯಾಲಯದಲ್ಲಿ ‘ನ್ಯಾಯದ ಲಭ್ಯತೆ ಮತ್ತು ಕಾನೂನು ನಿಯಮಗಳು’ ವಿಷಯದ ಮೇಲೆ ಕಾರ್ಯಾಗಾರ ನಡೆಯಿತು. ಹೈಕೋರ್ಟ್ ನ್ಯಾಯಾಧೀಶರಾದ ಬಿ.ಎಸ್. ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿ, ಕಾನೂನು ನಿಯಮದ ಪ್ರಕಾರ ನ್ಯಾಯ ಒದಗಿಸಲು ವಿಳಂಬವಾಗಿದೆ ಎಂದರೆ ನ್ಯಾಯ ನಿರಾಕರಿಸಲಾಗಿದೆ ಎಂದೇ ಅರ್ಥ. ಬಹಳಷ್ಟು ಜನರಿಗೆ ಕಾನೂನು ಅರಿವು ಇಲ್ಲ. ಕಾನೂನು ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಲು ಬಹಳಷ್ಟು ಮಾರ್ಗಗಳಿದ್ದರೂ, ಜನರು ಅರಿವು ಪಡೆಯುತ್ತಿಲ್ಲ. ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಲು ಜನರಿಗೆ ಸಾಮಾನ್ಯ ಕಾನೂನು ನಿಯಮಗಳ ಅರಿವು ಮುಖ್ಯ. ಕಾನೂನು ವಿದ್ಯಾರ್ಥಿಗಳು ಕೂಡ ಕಾನೂನಿನ ಅರಿವು ಪಡೆದು ಸಮಾಜದಲ್ಲಾಗುತ್ತಿರುವ ದೌರ್ಜನ್ಯದ ವಿರುದ್ಧ ಹೋರಾಡಬೇಕೆಂದು ಹೇಳಿದರು.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಬಾರ್ ಕೌನ್ಸಿಲ್ ಮತ್ತು ಸಿಂಡಿಕೇಟ್ ಸದಸ್ಯ ಎಮ್. ಅನಿಲ್ ಕುಮಾರ್, ಕೆಐಎಲ್ಪಿಎಆರ್ ನಿರ್ದೇಶಕ ಎಸ್.ಬಿ. ಗುಂಜಿಗವಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ನಾವಡ್ಗಿ, ಕೆಎಲ್ಎಸ್ಎ ಸದಸ್ಯೆ ಕಾರ್ಯದರ್ಶಿ ಉಮಾ, ಬಿಎಂಸಿಯ ವಕೀಲೆ ಮತ್ತು ಸಂಯೋಜಕಿ ಶೋಭಾ ಪಾಟೀಲ್, ಪ್ರಾಂಶುಪಾಲ ಪ್ರೊ. ಕೆ.ಎಸ್. ಸುರೇಶ್ ಕಾರ್ಯಕ್ರಮದಲ್ಲಿದ್ದರು.

Leave a Reply

comments

Tags

Related Articles

error: