ಮೈಸೂರು

ಬಿಎಸ್ ವೈ ಜನ್ಮದಿನಾಚರಣೆ ಹಿನ್ನೆಲೆ : ಬಾಣಂತಿಯರಿಗೆ ಕಿಟ್ ವಿತರಣೆ

ಬಿ.ಜೆ.ಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಮೈಸೂರಿನ ತುಳಸಿ ದಾಸಪ್ಪ  ಹೆರಿಗೆ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಕಿಟ್ ವಿತರಿಸುವ ಮೂಲಕ ಬಿಜೆಪಿ ಕಾರ್ಯಕರ್ತರು ವಿಭಿನ್ನವಾಗಿ ಆಚರಿಸಿದರು.

ಫೆ.27 ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜನ್ಮದಿನವಾಗಿದ್ದು, ಈ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ವಿಭಿನ್ನವಾಗಿ ಯಡಿಯೂರಪ್ಪ ಜನ್ಮ ದಿನವನ್ನು ಆಚರಿಸಲು ನಿರ್ಧಾರ ಕೈಗೊಂಡು ತುಳಸಿದಾಸಪ್ಪ ಆಸ್ಪತ್ರೆಯಲ್ಲಿ ಸರಿಸುಮಾರು 10 ಕ್ಕೂ ಹೆಚ್ಚು ಬಾಣಂತಿಯರಿಗೆ ಕಿಟ್ ವಿತರಿಸುವುದರ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದರು. ಇದೇವೇಳೆ  ಹೆಚ್.ವಿ.ರಾಜೀವ್ , ಲಕ್ಷ್ಮಿದೇವಿ. ಮಹೇಶ (ಕೇಬಲ್) ಸೇರಿದಂತೆ ಹಲವು ಕಾಯ೯ಕತ೯ರು ಉಪಸ್ಥಿತರಿದ್ದರು.

Leave a Reply

comments

Related Articles

error: