ಪ್ರಮುಖ ಸುದ್ದಿಮೈಸೂರು

ಯೂತ್ ಐಕಾನ್ ಅಡಿಷನ್ .20

ಮೈಸೂರು,ಅ.14 : ನಗರದ ಸ್ಪಾರ್ಕಲ್ ಇವೆಂಟ್ಸ್ ವತಿಯಿಂದ ಮಿಸ್ಟರ್, ಮಿಸ್ ಹಾಗೂ ಮಿಸೆಸ್ ಯೂತ್ ಐಕಾನ್ ಸ್ಪರ್ಧೆಯ ಅಡಿಷನ್ ಅನ್ನು ನಡೆಸಲಾಗುವುದು ಎಂದು ಸಂಸ್ಥೆ ನಿರ್ದೇಶಕ ಕೃಷ್ಣ ಪ್ರಸಾದ್ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಅ.20ರ ಬೆಳಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ಹೋಟೆಲ್ ಸಂದೇಶ್ ದಿ ಪ್ರಿನ್ಸ್ ನಲ್ಲಿ ಅಡಿಷನ್ ನಡೆಯಲಿದೆ. ಆಸಕ್ತರು ಭಾಗಿಯಾಗಬಹುದಾಗಿದ್ದು, ಆನ್ ಲೈನ್ ನಲ್ಲಿ ಹೆಸರು ನೊಂದಾಯಿಸಿಕೊಳ್ಳಲು ಐದು ನೂರು ರೂ.ಗಳು, ಆನ್ ಸ್ಪಾಟ್ ಗೆ ಏಳು ನೂರು ರೂ.ಗಳ ಪ್ರವೇಶ ಶುಲ್ಕ ವಿಧಿಸಲಾಗಿದೆ ಎಂದರು.

ರೂಪದರ್ಶಿಗಳಾದ ಕೃಪಾ, ಅಮೂಲ್ಯಗೌಡ ಹಾಗೂ ಸಂಘಟನಾ ಕಾರ್ಯದರ್ಶಿ ಎಂ.ಎ.ಧರ್ಮ ಗೋಷ್ಠಿಯಲ್ಲಿ ಭಾಗಿಯಾಗಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: