ಪ್ರಮುಖ ಸುದ್ದಿಮೈಸೂರು

ಅಕ್ಷರ ದಾಸೋಹ ನೌಕರರ ರಾಜ್ಯಾಧ್ಯಂತ ಹೋರಾಟ.17.

ಮೈಸೂರು.ಅ.14 : ಅಕ್ಷರ ದಾಸೋಹ ನೌಕರರನ್ನು ಆದೇಶವೊಂದರ ಪ್ರಕಾರ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್- ಧನ್ ಪಿಂಚಣಿ ಯೋಜನೆ ಒಳಪಡಿಸಿದಲ್ಲಿ ಈಗಾಗಲೇ ಸೇವೆ ಸಲ್ಲಿಸಿ 40 ವರ್ಷ ಮೀರಿರುವವರು ಪಿಂಚಣಿ ಯೋಜನೆಯಿಂದ ವಂಚಿತರಾಗಲಿರುವ ಕಾರಣ ಯೋಜನೆ ರದ್ದತಿಗೆ ಆಗ್ರಹಿಸಿ ಅ. 17 ರಂದು ರಾಜ್ಯಾದ್ಯಂತ ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸುವುದಾಗಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ತಿಳಿಸಿದೆ.

ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌರವಾಧ್ಯಕ್ಷರಾದ ಎಚ್.ಎಸ್. ಸುನಂದ, ಈ ಹಿಂದೆ ಅಕ್ಷರ ದಾಸೋಹ ನೌಕರರು ಪ್ರತಿಭಟನೆ ನಡೆಸಿದಾಗ ಅವರನ್ನು ಎಲ್‌ಐಸಿ ಪಿಂಚಣಿ ಯೋಜನೆಗೆ ಒಳಪಡಿಸುವ ಭರವಸೆ ನೀಡಲಾಗಿತ್ತು.

ಆದರೆ ಈಗ ಪ್ರಧಾನ ಮಂತರಿ ಶ್ರಮಯೋಗಿ ಮಾನ್- ಧನ್ ಪಿಂಚಣಿ ಯೋಜನೆಗೆ ಒಳಪಡಿಸುವ ಆದೇಶ ಹೊರಡಿಸಲಾಗಿದೆ. ಇದರಿಂದಾಗಿ ಸಾವಿರಾರು ಮಂದಿ ಅದರಿಂದ ಹೊರತಾಗುತ್ತಾರೆ. ಆದ್ದರಿಂದ ಆ ಯೋಜನೆ ರದ್ದು ಪಡಿಸಿ ಎಲ್‌ಐಸಿ ಪಿಂಚಣಿ ಯೋಜನೆ ವ್ಯಾಪ್ತಿಗೆ ತರಬೇಕೆಂದು ಆಗ್ರಹಿಸಿದರು.

ಇದೇ ವೇಳೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಇರುವ ಶಾಲಾ ಆವರಣದಲ್ಲಿ ತರಕಾರಿ, ಸೊಪ್ಪು, ಹಣ್ಣು ಬೆಳೆಯಲು ಅವಕಾಶ ನೀಡಿದ ಉದ್ಯೋಗ ಖಾತ್ರಿ ಯೋಜನೆ ಹಣದ ಸ್ವಲ್ಪ ಭಾಗವನ್ನು ಅಕ್ಷರ ದಾಸೋಹ ನೌಕರರಿಗೆ ನೀಡಬೇಕು.

ಇನ್ನು, ಹಾಜರಾತಿ ಕಡಿಮೆ ಎಂಬ ಕಾರಣದಿಂದ ಅಕ್ಷರ ದಾಸೋಹ ನೌಕರರನ್ನು ಕೆಲಸದಿಂದ ತೆಗೆಯುವ ಪ್ರವೃತ್ತಿ ಕೈಬಿಡಬೇಕು ಎಂಬಿವೇ ಮೊದಲಾದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂದು ಪ್ರತಿಭಟನೆ ನಡೆಸಲಾಗುವುದೆಂದರು.

ಬಳಿಕ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಜಿ. ಜಯರಾಂ ಮಾತನಾಡಿ, ಸರ್ಕಾರ ಅಕ್ಷರ ದಾಸೋಹ ನೌಕರರನ್ನು ಶೋಷಿಸುತ್ತಿದ್ದು, ಎಸ್‌ಡಿಎಂಸಿಗಳಲ್ಲಿರುವವರೂ ಅವರಿಗೆ ಬೆದರಿಕೆ ಒಡ್ಡುವುದು ನಡೆದಿದೆ. ಅಲ್ಲದೆ, ಇವರಿಗೆ ನಿವೃತ್ತಿ ಬಳಿಕ ಇಡುಗಂಟು ನೀಡಿಕೆಯೂ ಇಲ್ಲ. ಈ ಕುರಿತಂತೆ ಸರ್ಕಾರದೊಡನೆ ಸಾಕಷ್ಟು ಚರ್ಚಿಸಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಅ.17ರ ಪ್ರತಿಭಟನೆಗೆ ಸರ್ಕಾರ ಮಣಿಯದಿದ್ದರೆ ಡಿಸೆಂಬರ್ ಮೊದಲ ವಾರದಲ್ಲಿ ರಾಜ್ಯಾದ್ಯಂತ ಅಕ್ಷರ ದಾಸೋಹ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಬೇಕಾಗುತ್ತದೆಂದು ಎಚ್ಚರಿಸಿದರು.

ಕೆ. ಮಂಜುಳಾ, ಶಂಕರದೇವಮ್ಮ, ಶಿವಣ್ಣ, ಮಂಜುಳಾ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: