ಮೈಸೂರು

ದಲಿತ ವರ್ಗದ ಮೇಲಿನ ಶೋಷಣೆ ನಿಂತಿಲ್ಲ : ಪ್ರೊ.ದಯಾನಂದ ಮಾನೆ ವಿಷಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ತಿದ್ದುಪಡಿ ಕಾಯ್ದೆ-2015ರ ಕುರಿತು ವಕೀಲರುಗಳಿಗಾಗಿ  ಸಂವಾದ ಕಾರ್ಯಕ್ರಮವನ್ನು ಮಾನಸಗಂಗ್ರೋತಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದಲ್ಲಿ ದಲಿತ ವಿಮೋಚನೆಯ ರಾಷ್ಟ್ರೀಯ ಮಾನವ ಹಕ್ಕುಗಳ ವೇದಿಕೆ ಮತ್ತು ನವದೆಹಲಿಯ ನ್ಯಾಷನಲ್ ದಲಿತ್ ಮೂವ್‍ಮೆಂಟ್ ಫಾರ್ ಜಸ್ಟೀಸ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿತ್ತು.

ಕಾರ್ಯಾಗಾರವನ್ನು ಮೈಸೂರು ವಿವಿಯ ಹಂಗಾಮಿ ಕುಲಪತಿ ಪ್ರೊ.ದಯಾನಂದ ಮಾನೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಹಿಂದೂ ಧರ್ಮದಿಂದ ದಲಿತರ ಮೇಲೆ ನಿರಂತರವಾಗಿ ಮಾನಸಿಕ ಹಾಗೂ ದೈಹಿಕ ಹಲ್ಲೆ ದೌರ್ಜನ್ಯಗಳು ನಡೆಯುತ್ತಲೆ ಇವೆ. ದೇಶ ಸ್ವಾತಂತ್ರ್ಯಗಳಿಸಿ 70 ವರ್ಷಗಳು ಸಂದಿದ್ದರೂ ಇಂದಿಗೂ ಪರಿಸ್ಥಿತಿ ಅಷ್ಟೇನು ಸುಧಾರಿಸಿಲ್ಲ ಎಂದು ವಿಷಾದಿಸಿದರು.  ಮೇಲ್ವರ್ಗ ಹಾಗೂ ಕೆಳವರ್ಗಗಳಲ್ಲಿ ಅಂತರದ ಕಂದಕ ಹೆಚ್ಚಿದೆ. ಸಮಾನತೆಯ ಹರಿಕಾರ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ ಅವರ ವಿಚಾರಧಾರೆಗಳನ್ನು ವೈಯುಕ್ತಿಕ ಏಳ್ಗೆಗಾಗಿ ಕೆಲ ಆಷಾಢಭೂತಿಗಳು ಬಳಸುತ್ತಿರುವುದು ದುಃಖಕರವೆಂದರು. ದೀನ ದಲಿತರನ್ನು ಶೋಷಿತ ಹೀನಾಯ ಬದುಕಿನಿಂದ ಮೇಲೆತ್ತಲು ಹಲವಾರು ಸಮಾಜಪರ ಯೋಜನೆಗಳನ್ನು ಹಾಕಿದ್ದರು, ಆ ಯೋಜನೆಗಳು ಫಲಕಾರಿಯಾಗದೆ ಕಡತಗಳಲ್ಲಿರುವುದೇ ಹೆಚ್ಚು, ಆದ್ದರಿಂದ ದಲಿತರು ಶೈಕ್ಷಣಿಕವಾಗಿ ಪ್ರಭಾವಿಗಳಾದಾಗ ಮಾತ್ರ ಸಮಾಜದಲ್ಲಿ ಮೇಲುಸ್ತರದಲ್ಲಿ ನಿಲ್ಲುವುದಕ್ಕೆ ಸಾಧ್ಯವೆಂದು ಆಶಿಸಿದರು.

ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಜಿ.ಕೆ.ಗೋಖಲೆ, ನವದೆಹಲಿ ನ್ಯಾಷನಲ್ ದಲಿತ್ ಮೂವ್‍ಮೆಂಟ್ ಫಾರ್ ಜಸ್ಟೀಸ್ ಪ್ರೋಗ್ರಾಮ್ ಆಫೀಸರ್ ಅಭಿರಾಮಿ, ದಲಿತ ವಿಮೋಚನೆಯ ರಾಷ್ಟ್ರೀಯ ಮಾನವ ಹಕ್ಕುಗಳ ವೇದಿಕೆ ರಾಜ್ಯ ಸಂಚಾಲಕ ಬಸವರಾಜ ಕೌತಾಳ, ವೇದಿಕೆ ರಾಜ್ಯ ಸಲಹಾ ಕಾರ್ಯದರ್ಶಿ ಆರ್.ಸಿದ್ದರಾಜು, ಸಂಯೋಜನಾಧಿಕಾರಿ ಡಾ.ಎಸ್.ನರೇಂದ್ರ ಕುಮಾರ್ ಹಾಗೂ ಇತರರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

Leave a Reply

comments

Related Articles

error: