ಮೈಸೂರು

ಮಾದಕ ದ್ರವ್ಯಗಳ ಸೇವನೆಯಿಂದಾಗಿ ದೇಶದ ಪ್ರಗತಿ ಕುಂಠಿತಗೊಂಡಿರುವುದು ವಿಷಾದಕರ ಸಂಗತಿ : ಹಿರಿಯ ನ್ಯಾಯಾಧೀಶ ಯಶವಂತಕುಮಾರ್

'ಮಾದಕ ದ್ರವ್ಯಗಳ ಸೇವನೆ ತಡೆಗಟ್ಟುವಿಕೆ' ಕಾರ್ಯಾಗಾರ

ಮೈಸೂರು,ಅ.14:-  ಮಾದಕ ದ್ರವ್ಯಗಳ ಸೇವನೆಯಿಂದಾಗಿ ದೇಶದ ಪ್ರಗತಿ ಕುಂಠಿತಗೊಂಡಿರುವುದು ವಿಷಾದಕರ ಸಂಗತಿ ಎಂದು ಮೈಸೂರು ಜಿಲ್ಲಾ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಯಶವಂತಕುಮಾರ್ ಹೇಳಿದರು.
ಅವರು ಇಂದು ಬೆಳಿಗ್ಗೆ ನಗರದ ಕೃಷ್ಣಮೂರ್ತಿ ಪುರಂನಲ್ಲಿರುವ ಎಂ.ಎಂ.ಕೆ. ಮತ್ತು ಎಸ್.ಡಿ.ಎಂ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ನ್ಯಾಷನಲ್ ಇಇನ್ಸಟಿಟ್ಯೂಟ್ ಆಫ್ ಸೋಷಿಯಲ್ ಡಿಫೆನ್ಸ್, ರಾಷ್ಟ್ರೀಯ ಸ್ವಯಂ ಸೇವಾಯೋಜನೆ, ಎಂ.ಎಂ.ಕೆ ಮತ್ತು ಎಸ್.ಡಿ.ಎಂ. ಮಹಿಳಾ ಮಹಾ ವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ‘ಮಾದಕ ದ್ರವ್ಯಗಳ ಸೇವನೆ ತಡೆಗಟ್ಟುವಿಕೆ’ ಕುರಿತು ಆಯೋಜಿಸಿದ್ದ ಒಂದು ದಿನದ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿನ ಯುವ ಜನತೆಯಲ್ಲಿ ಹೆಚ್ಚು ಮಂದಿ ಈ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ದೇಶದ ಅಭಿವೃದ್ಧಿ ಯುವಜನತೆಯ ಕೈಯಲ್ಲಿದೆ. ಅದಕ್ಕೆ ಅವರು ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಬೇಕು, ಆಗ ಮಾತ್ರ ದೇಶದ ಸರ್ವಾಂಗೀಣ ಪ್ರಗತಿ ಸಾಧ್ಯ ಎಂದುರು. ಇಂದು ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿರುವುದು ಆತಂಕಕಾರಿ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
ನವದೆಹಲಿಯ ಸಾಮಾಜಿಕ ನ್ಯಾಯ ಮತ್ತು ಎಂಪವರ್ ಮೆಂಟ್ ಸಚಿವಾಲಯದ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ನಮ್ಮದೇಶದಲ್ಲಿ ಸರಿಸುಮಾರು 3.16 ಕೋಟಿ ಮಾದಕ ವ್ಯಸನಿಗಳಿದ್ದಾರೆ. ಇವರಲ್ಲಿ 72 ಲಕ್ಷಮಂದಿ ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದು ಈ ದುಶ್ಚಟಕ್ಕೆ ಬಲಿಯಾಗಿದ್ದಾರೆ. 25ಲಕ್ಷಮಂದಿ ಈ ದುಶ್ಚಟದಿಂದ ಹೊರಬರಲಾಗದ ಪರಿಸ್ಥಿತಿಯಲ್ಲಿದ್ದಾರೆ. ಅದರಂತೆ ದೇಶದ 16 ಕೋಟಿ ಜನತೆ ಆಲ್ಕೋಹಾಲ್ ಚಟಕ್ಕೆ ಬಲಿಯಾಗಿದ್ದು ಇದರಲ್ಲಿ 7.50 ಕೋಟಿ ಮಂದಿ ಈ ಚಟದಿಂದ ಬಳಲುತ್ತಿದ್ದರೆ 2.90 ಕೋಟಿ ಮಂದಿ ಈ ಚಟದಿಂದ ಹೊರಬರಲಾಗದ ಪರಿಸ್ಥಿತಿಯಲ್ಲಿದ್ದಾರೆ. ಅದರಂತೆ ಹೆರಾಯಿನ್ ಸೇವನೆಗೆ 2.30 ಕೋಟಿ ಈಡಾಗಿದ್ದರೆ ಇವರಲ್ಲಿ 77 ಲಕ್ಷಮಂದಿ ಇದನ್ನು ಸೇವಿಸುತ್ತಿದ್ದರೆ 28 ಲಕ್ಷ ಮಂದಿ ಈ ಚಟದಿಂದ ಬಿಡುಗಡೆ ಹೊಂದದ ಪರಿಸ್ಥಿತಿಯಲ್ಲಿರುವುದನ್ನು ಗಮನಿಸಿದರೆ ಮಾದಕ ವಸ್ತುಗಳ ಸೇವನೆಯು ದೇಶದಲ್ಲಿ ಗರಿಷ್ಠ ಮಟ್ಟ ತಲುಪಿದೆ. ಇದು ದೇಶದ ಪ್ರಗತಿಗೆ ತೊಡಕಾಗಿದೆ ಎಂದು ನುಡಿದರು.   ಇಂತಹುದೇ ಪರಿಸ್ಥಿತಿ ವಿಶ್ವಾದ್ಯಂತ ಗೋಚರವಾಗಿರುವುದರಿಂದ ಇದನ್ನು ಗಮನಿಸಿದ ವಿಶ್ವಸಂಸ್ಥೆಯು ಪ್ರತಿ ವರ್ಷದ ಜೂನ್ 26ರಂದು ಮಾದಕ ವ್ಯಸನಿ ವಿರೋಧಿ ದಿನಾಚರಣೆಯನ್ನು ಆಚರಿಸಿಕೊಂಡು ಬರುವುದರ ಮೂಲಕ ವಿಶ್ವಾದ್ಯಂತ ಮದ್ಯ ಸೇವವೆಯಿಂದ ಉಂಟಾಗುವ ದುಷ್ಟರಿಣಾಮಗಳ ಬಗ್ಗೆ ಅರಿವು ಮೂಡಿಸುತ್ತಿದೆ. ಇದೇ ರೀತಿ ನಮ್ಮ ಯುವಜನತೆ ಹಾಗೂ ರಾಷ್ಟ್ರೀಯ ಸ್ವಯಂಸೇವಕರು ಮದ್ಯಪಾನದ ಸೇವನೆಯ ಬಗ್ಗೆ ಅರಿವು ಮೂಡಿಸಲು ಮುಂದಾಗಲು ಇಂತಹ ಕಾರ್ಯಕ್ರಮಗಳು ತೀರಾ ಅವಶ್ಯವಾಗಿದ್ದು ಇದನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರಲ್ಲದೆ ಧೂಮಪಾನ, ಮದ್ಯಪಾನ ಹಾಗೂ ಮೊಬೈಲ್‍ಗಳಿಂದ ಆದಷ್ಟು ದೂರವಿರುವಂತೆ   ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ರಾಜ್ಯದ ಎಲ್ಲಾ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಕಾನೂನು ಸೇವೆಗಳ ಪ್ರಾಧಿಕಾರವು ಕರ್ತವ್ಯ ನಿರ್ವಹಿಸುತ್ತಿದ್ದು ಕಾನೂನನ್ನು ಎದುರಿಸಲು ಶಕ್ತಿ ಇಲ್ಲದವರಿಗೆ ಈ ಪ್ರಾಧಿಕಾರವು ಸಹಾಯ ಹಸ್ತ ನೀಡಲಿದ್ದು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ನಾನು ಪಿ.ಯು.ಸಿ. ವಿದ್ಯಾಭ್ಯಾಸವನ್ನು ಉಜಿರೆಯ ಇದೇ ಸಂಸ್ಥೆಯಲ್ಲಿ ಮಾಡಿದೆ. ಮಂಗಳೂರಿನ ಸಂಸ್ಥೆಯಲ್ಲಿ ಕಾನೂನು ಪದವಿಯನ್ನು ಪಡೆದಿದ್ದು ಇಂದು ಇದೇ ಸಂಸ್ಥೆಯಲ್ಲಿ ಇಂತಹ ಉತ್ತಮ ಕಾರ್ಯಾಗಾರವನ್ನು ನನ್ನಿಂದ ಉದ್ಘಾಟಿಸಿರುವುದು ನನಗೆ ಬಹಳ ಸಂತಸ ತಂದಿದೆ ಇದಕ್ಕಾಗಿ ನಾನು ಸಂಸ್ಥೆಯ ಆಡಳಿತ ಮಂಡಳಿಯವರನ್ನು ಅಭಿನಂದಿಸುತ್ತೇನೆ ಎಂದರು.
ಕಾರ್ಯಾಗಾರದಲ್ಲಿ ಮೈಸೂರು ವಿವಿಯ ರಾಷ್ಟ್ರೀಯ ಸ್ವಯಂ ಸೇವಾ ವಿಭಾಗದ ಸಂಚಾಲಕ ಪ್ರೊ.ಬಿ. ಚಂದ್ರಶೇಖರ್, ಎಸ್.ಡಿ.ಎಂ. ಸಂಸ್ಥೆಯ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಮಾರುತಿ ಪ್ರಸನ್ನ ಹಾಗೂ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು . ಕಾರ್ಯಾಗಾರದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸಾಯಿನಾಥ್ ಮಲ್ಲಿಗೆ ಮಾಡು ವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: