ಮೈಸೂರು

ಡೈರಿ ಹಗರಣದ ಕೂಲಂಕುಷ ತನಿಖೆಯಾಗಲಿ : ಎಸಿಬಿ ದೂರುದಾರ ಬಸವೇಗೌಡ ಒತ್ತಾಯ

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಮಾಡುತ್ತಿದ್ದ ದಬ್ಬಾಳಿಕೆಯನ್ನು ಇಂದಿನ ಕಾಂಗ್ರೆಸ್ ಪಕ್ಷ ಮಾಡುತ್ತಿದೆ.  ದೇಶವನ್ನು ಕೊಳ್ಳೆ ಹೊಡೆದು ವಿದೇಶಿ ಬ್ಯಾಂಕ್‍ಗಳಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಬೇನಾಮಿಯಾಗಿ ಸ್ವತ್ತಾಗಿ ಇಡಲಾಗಿದೆ ಎಂದು  ಭ್ರಷ್ಟಾಚಾರ ನಿಗ್ರಹ ದಳದ ದೂರುದಾರ ಆರ್.ಬಿ.ಬಸವೇಗೌಡ ಆರೋಪಿಸಿದರು.

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿ ರಾಜ್ಯ ಕಾಂಗ್ರೆಸ್ ಸರ್ಕಾರದ ಸರಣಿ ಹಗರಣಗಳನ್ನು ಖಂಡಿಸಿ ‘ಡೈರಿ’ (ಗೋವಿಂದ ರಾಜು ಡೈರಿ) ಪ್ರಕರಣದಲ್ಲಿ ಮಾಧ್ಯಮಗಳ ಹೆಸರು ಕೇಳಿ ಬರುತ್ತಿರುವುದು ನಿಜಕ್ಕೂ ವಿಷಾದನೀಯವೆಂದರು. ಸಮಾಜದ ನಾಲ್ಕನೇ ಸ್ತಂಭವಾದ ಮಾಧ್ಯಮವು ಸಮಾಜದ ಅಂಕುಡೊಂಕುಗಳನ್ನು ತಿದ್ದು ಎಚ್ಚರಿಸುವ ಕಾವಲು ನಾಯಿಯಂತೆ ಕಾರ್ಯ ನಿವರ್ಹಿಸುತ್ತಿವೆ. ಇತ್ತೀಚೆಗೆ ಡೈರಿ ಪ್ರಕರಣದಲ್ಲಿ ಮಾಧ್ಯಮಗಳಿಗೂ 7 ಕೋಟಿ ರೂಪಾಯಿ ಸಂದಾಯವಾಗಿರುವ ಬಗ್ಗೆ ಉಲ್ಲೇಖವಿದ್ದು ಹಗರಣವೂ ಅಚ್ಚರಿಯ ತಿರುವು ಪಡೆಯುತ್ತಿದೆ. ಹಾಗಾಗಿ ಈ ಬಗ್ಗೆ ಕೂಲಂಕುಷ ತನಿಖೆಯಾಗಬೇಕೆಂದು ಆಗ್ರಹಿಸಿದರು. ಮಾಧ್ಯಮಗಳೇ ಭ್ರಷ್ಟಾಚಾರದಲ್ಲಿ ಮುಳುಗಿದರೆ ಸಮಾಜದ ಉನ್ನತಿ ಹೇಗೆಂದು ವಿಷಾದಿಸಿದ ಅವರು, ಸಾರ್ವಜನಿಕರು ಮಾಧ್ಯಮವನ್ನು ಅನುಮಾನಿಸುವ ಹಂತಕ್ಕೆ ತಲುಪಿದ್ದಾರೆ.  ಪ್ರಕರಣವನ್ನು ಮೌನವಾಗಿ ಸಹಿಸದೆ ಸತ್ಯಾಂಶವನ್ನು ಹೊರ ಹಾಕುವ ಮೂಲಕ  ಶ್ರೀಸಾಮಾನ್ಯರು ಮಾಧ್ಯಮದ ಮೇಲಿರಿಸಿರುವ ನಂಬಿಕೆಯನ್ನು ಕಾಪಾಡಿಕೊಳ್ಳಿ ಎಂದು ಆಗ್ರಹಿಸಿದರು.

ಲೋಕಾಯುಕ್ತವನ್ನು ನಿರ್ಮೂಲನೆ ಮಾಡಿ ಎಸಿಬಿಯನ್ನು ಅಸ್ತಿತ್ವಕ್ಕೆ ತಂದಿರುವ ಸರ್ಕಾರ ತನ್ನ ಕಣ್ಸನ್ನೆಯಲ್ಲೇ ಕುಣಿಸುತ್ತಿದ್ದು ಯಾವುದೇ ದೂರು ದಾಖಲಾದರೂ ನಿಷ್ಪಕ್ಷಪಾತ ತನಿಖೆ ನಡೆಸದೆ ಆರೋಪಿಗಳು ಖುಲಾಸೆಯಾಗುತ್ತಿದ್ದಾರೆ. ಲೋಕೋಪಯೋಗಿ ಇಲಾಖೆಯಲ್ಲಿ ಟೆಂಡರ್‍ ಹಗರಣದಲ್ಲಿ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದ್ದರೂ ಈ ಬಗ್ಗೆ ದಾಖಲೆ ಸಮೇತ ದೂರು ಸಲ್ಲಿಸಿದರೂ ಇಂದಿಗೂ ಇಲಾಖೆಯಿಂದ ತನಿಖೆಯೇ ನಡೆದಿಲ್ಲದಿರುವುದು ಖೇದಕರವೆಂದರಲ್ಲದೇ, ನನ್ನ ಮೇಲೆ ಸುಳ್ಳು ಆರೋಪಗಳಿದ್ದರೆ ತನಿಖೆ ನಡೆಯಲಿ ಎಂದು ಸವಾಲೆಸೆದರು.

Leave a Reply

comments

Related Articles

error: