ಮೈಸೂರು

ಬಲ್ಲಹಳ್ಳಿ ಬಡಾವಣೆಗೆ ಜಮೀನು ನೀಡಲು ಖಡಾ ಖಂಡಿತ ನಿರಾಕರಿಸಿದ ಭೂಮಾಲೀಕರು : ಬಲ್ಲಹಳ್ಳಿ ವಸತಿ ಬಡಾವಣೆ ಯೋಜನೆ ಮೂಲೆಗುಂಪಾಗುವುದು ಖಚಿತ

ಮೈಸೂರು,ಅ.15:-  ಬಹು ಮಹತ್ವಾಕಾಂಕ್ಷೆಯ ಬಲ್ಲಹಳ್ಳಿ ವಸತಿ ಬಡಾವಣೆ ಯೋಜನೆ ಭೂಮಿ ನೀಡಲು ರೈತರು ನಿರಾಕರಿಸಿರುವುದರಿಂದ ಮೂಲೆಗುಂಪಾಗುವುದು ಖಚಿತವಾಗಿದೆ. ಯೋಜನೆಯ ಅನುಕೂಲ, ಭವಿಷ್ಯದ ಸೌಲಭ್ಯಗಳು, ಸುತ್ತ ಮುತ್ತಲಿನ ಗ್ರಾಮಗಳಿಗೆ ಸಿಗುತ್ತಿದ್ದ ಸಂಪರ್ಕ ವ್ಯವಸ್ಥೆ, ವೈಯುಕ್ತಿಕವಾಗಿ ಭೂ ಮಾಲೀಕರಿಗೆ ಆಗುತ್ತಿದ್ದ ಆರ್ಥಿಕ ಲಾಭ ಇತ್ಯಾದಿ ಅಂಶಗಳನ್ನು ತಿಳಿಸಿ ಮನವರಿಕೆ ಮಾಡದೇ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದೇ  ರೈತರ ಆಕ್ರೋಶಕ್ಕೆ ಕಾರಣ ಎಂಬುದು ನಿನ್ನೆ  ನಡೆದ ಸಭೆಯಲ್ಲಿ ಮುಡಾ ಅಧಿಕಾರಿಗಳು ಹಾಗೂ ಸದಸ್ಯರುಗಳಿಗೆ ಮನವರಿಕೆಯಾಗಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ ಮೈಸೂ ರಿನ ಮಾನಸಗಂಗೋತ್ರಿಯಲ್ಲಿರುವ ರಾಣಿ ಬಹ ದ್ದೂರ್ ಸಭಾಂಗಣದಲ್ಲಿ  ನಡೆದ ಸಭೆಯಲ್ಲಿ ಬಲ್ಲಹಳ್ಳಿ ಬಡಾವಣೆಗೆ ಜಮೀನು ನೀಡಲು ಖಡಾ ಖಂಡಿತ ನಿರಾಕರಿಸಿದ ಭೂಮಾಲೀಕರು, ಸರ್ಕಾರದಿಂದ ಹೊರಡಿಸಿರುವ ಪ್ರಾಥಮಿಕ ಅಧಿಸೂಚನೆಯನ್ನು ರದ್ದುಗೊಳಿಸಿ, ಡಿನೋಟಿಫಿಕೇಷನ್ ಮಾಡುವಂತೆ ಪಟ್ಟು ಹಿಡಿದರು.

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ ಅಧಿನಿಯಮ 1987ರ ಕಲಂ 17(1)ರ ಪ್ರಕಾರ ವಸತಿ ಬಡಾವಣೆ ನಿರ್ಮಿಸಲು 2012ರಲ್ಲೇ ಮುಡಾ ನಿರ್ಣಯಿಸಿ 2016ರ ಸೆಪ್ಟೆಂಬರ್ 28ರಂದೇ ಮೈಸೂರು ತಾಲೂಕು, ಜಯಪುರ ಹೋಬಳಿ ಬಲ್ಲ ಹಳ್ಳಿ ಗ್ರಾಮದ 381.1 ಎಕರೆಯನ್ನು ವಸತಿ ಯೋಜನೆ ಗಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ವು ಭೂ ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಆದರೆ ತಕ್ಷ ಣವೇ ಆ ಜಮೀನುಗಳ ಖಾತೆದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಿಯಾಗಿ ಮನವರಿಕೆ ಮಾಡಿ ಒಪ್ಪಿಗೆ ಪತ್ರ ಪಡೆದು, ಬಡಾವಣೆ ನಿರ್ಮಿಸುವ ಪ್ರಕ್ರಿಯೆ ಆರಂಭಿಸಿದ್ದರೆ, ಶೀಘ್ರ ಯೋಜನೆ ಅನು ಷ್ಠಾನಗೊಳ್ಳುತ್ತಿತ್ತು. ಆಗ ಉಳಿದವರೂ ಸಹ ಜಮೀನು ನೀಡಲು ಮುಂದೆ ಬರುತ್ತಿದ್ದರು.

ಪ್ರಾಥಮಿಕ ಅಧಿಸೂಚನೆ ಮಾಡಿರುವುದರಿಂದ ಮುಡಾದವರೂ ಬಡಾವಣೆ ಮಾಡಲಿಲ್ಲ. ಇತ್ತ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ, ಮದುವೆ, ಇನ್ನಿತರ ಅನಿ ವಾರ್ಯತೆ ಬಂದಾಗ ಅಲ್ಪಸ್ವಲ್ಪ ಜಮೀನು ಮಾರಿ ಕೊಳ್ಳಲು ಅಡ್ಡಿಯಾಗಿದ್ದೇ ರೈತರು, ಮುಡಾ ವಿರುದ್ಧ ತಿರುಗಿ ಬೀಳಲು ಕಾರಣ  ಎಂಬ ಆರೋಪಗಳು ಕೇಳಿ ಬರುತ್ತಿದೆ. ಈ ಹಿಂದೆಯೇ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯಲ್ಲಿ ವಸತಿ ಯೋಜನೆ   ಮಾಡದ ಪ್ರಾಧಿಕಾರ, ಭೂ ಮಾಲೀಕರಿಗೆ ಪರಿಹಾರವನ್ನೂ ನೀಡದೇ ಸತಾಯಿಸುತ್ತಿರುವುದ ರಿಂದ ಬೇಸತ್ತಿರುವ ರೈತರಿಗೆ ತಮ್ಮ ಭೂಮಿ ನೀಡಿದರೆ ಅನುಕೂಲಕ್ಕಿಂತ ತೊಂದರೆಯೇ ಹೆಚ್ಚು ಎಂಬ ಕಹಿ ಅನುಭವವಾಗಿರುವುದರಿಂದ ಖಾತೆದಾರರು ಮುಡಾಗೆ ಜಮೀನು ನೀಡಲು ಹಿಂಜರಿಯುತ್ತಿದ್ದಾರೆ. ಭೂಮಿ ಕೊಟ್ಟು ಪರಿಹಾರ ಪಡೆಯಲು ವರ್ಷ ಗಟ್ಟಲೆ ಅಲೆಸುವುದಲ್ಲದೆ ಲಂಚ ಕೊಡಬೇಕು. ಕೆಲವೊಮ್ಮೆ ನ್ಯಾಯಾಲಯಗಳಲ್ಲಿ ದಾವೆ ಹೂಡಿ ಹೋರಾಟ ನಡೆಸ ಬೇಕು, ಖರ್ಚು-ವೆಚ್ಚದ ಜೊತೆಗೆ ಸಮಯ ವ್ಯರ್ಥ ವಾಗಿರುವುದೇ  ರೈತರಿಗೆ ವಿಶ್ವಾಸ ಕಳೆದುಕೊಂಡಿದೆ.  ಸುಮಾರು 5,000 ನಿವೇಶನ ರಚಿಸಲುದ್ದೇಶಿಸಿರುವ ಬಲ್ಲ ಹಳ್ಳಿ ಬಡಾವಣೆ ಯೋಜನೆಯೂ ಇದೀಗ ರೈತರ ಆಕ್ಷೇಪದಿಂದಾಗಿ ನೆನೆಗುದಿಗೆ ಬಿದ್ದಂತಾಗಿದ್ದು, ಭೂಮಿಯೇ ಇಲ್ಲದಿರುವುದರಿಂದ ಮುಡಾ ಕೇವಲ ಖಾಸಗಿ ಗೃಹ ನಿರ್ಮಾಣ ಸಹಕಾರ ಸಂಘಗಳು, ಡೆವಲಪರ್‍ಗಳಿಗೆ ಬಡಾವಣೆ ನಕ್ಷೆ ಅನುಮೋ ದನೆ, ನಿವೇಶನ ಬಿಡುಗಡೆ, ಎನ್‍ಓಸಿ ನೀಡುವಂ ತಹ ಕೆಲಸ ಮಾಡಬೇಕೇ ಹೊರತು, ತನ್ನ ಮೂಲ ಉದ್ದೇಶ ಸಾಕಾರಗೊಳಿಸಲು ಸಾಧ್ಯವಾಗುವುದಿಲ್ಲ.

ಮುಡಾ ಆಯುಕ್ತ ಪಿ.ಎಸ್.ಕಾಂತರಾಜು ಮಾತನಾಡಿ  ಬಲ್ಲಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ವಸತಿ ಬಡಾವಣೆ ನಿರ್ಮಿಸಲು ಪ್ರಾಧಿಕಾರವು 2012ರಲ್ಲಿ ನಿರ್ಣಯ ಕೈಗೊಂಡಿದ್ದು, 2015ರಲ್ಲಿ ಸರ್ಕಾರ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿತು. ಗೋಮಾಳವಾದ್ದರಿಂದ ಬಲ್ಲಹಳ್ಳಿ ಸರ್ವೆ ನಂಬರ್ 24ರ ಜಮೀನನ್ನು ಹೊರತುಪಡಿಸಿ ಉಳಿದ 484.26 ಎಕರೆಯಲ್ಲಿ ಬಡಾವಣೆ ನಿರ್ಮಿಸಲು ಸರ್ಕಾರ ಅನುಮತಿ ನೀಡಿದ ನಂತರ ಪ್ರಾಧಿಕಾರವು 2016ರ ಜೂನ್ 24ರಂದು 384.1 ಎಕರೆ ಪ್ರದೇಶಕ್ಕೆ 4, ರೀತ್ಯಾ ಪ್ರಾಥಮಿಕ ಅಧಿಸೂಚನೆ ಹೊರಡಿಸಿತು ಎಂದು ಕಾಂತರಾಜ್ ಪ್ರಸ್ತಾವನೆಯಲ್ಲಿ ತಿಳಿಸಿದರು. 2009ರಲ್ಲಿ 40:60ರ ಅನುಪಾತದಂತೆ ಭೂಮಿ ಪಡೆಯಬೇಕೆಂದು ನಿರ್ಧರಿಸಲಾಗಿತ್ತಾದರೂ, ಭೂಮಾಲೀಕರು ಒಪ್ಪದ ಕಾರಣ, 2015ರಲ್ಲಿ 50:50 ಅನುಪಾತದಲ್ಲಿ ಹಂಚಿಕೆಗೂ ಮುಡಾ ಒಪ್ಪಿಗೆ ಸೂಚಿಸಿತ್ತಾದರೂ, ಹಲವು ಸಭೆಗಳನ್ನೂ ನಡೆಸಿದಾಗಲೂ ಜಮೀನು ನೀಡಲು ಹಿಂಜರಿಯುತ್ತಿರುವ ಕಾರಣ ಇಂದು ಮತ್ತೆ ಸಭೆ ಕರೆದಿರುವುದಾಗಿ ಕಾಂತರಾಜ ವಿವರಿಸಿದರು.

ಸಭೆಯಲ್ಲಿ ಶಾಸಕ ಬಿ.ಹರ್ಷವರ್ಧನ, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ, ಪಾಲಿಕೆ ಸದಸ್ಯ ಎಸ್‍ಬಿಎಂ ಮಂಜು, ಮುಡಾ ಕಾರ್ಯದರ್ಶಿ ಸವಿತಾ, ಸೂಪರಿಂಟೆಂಡಿಂಗ್ ಇಂಜಿನಿಯರ್ ಪ್ರಭಾಕರ್, ನಗರ ಯೋಜಕ ಸದಸ್ಯ ಬಿ.ಎನ್.ಗಿರೀಶ, ವಿಶೇಷ ಭೂಸ್ವಾಧೀನಾಧಿಕಾರಿ ಚಂದ್ರಮ್ಮ, ಎಕ್ಸಿಕ್ಯೂಟಿವ್ ಇಂಜಿನಿಯರ್ ಸುವರ್ಣ, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಎಸ್.ಕೆ.ಭಾಸ್ಕರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಮುಖಂಡ ಹೊನ್ನೂರು ಪ್ರಕಾಶ ಸೇರಿದಂತೆ ಹಲವರು   ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: