ಕರ್ನಾಟಕ

ಗೀತರಚನೆಕಾರ ಕವಿರಾಜ್ ಗೆ ಪಿತೃ ವಿಯೋಗ

ಬೆಂಗಳೂರು,ಅ.15-ಗೀತರಚನೆಕಾರ, ನಿರ್ದೇಶಕ ಕವಿರಾಜ್ ಅವರ ತಂದೆ ಹರಿಯಪ್ಪ ನಾಯ್ಕ (65) ನಿಧನರಾಗಿದ್ದಾರೆ.

ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಹರಿಯಪ್ಪ ನಾಯ್ಕ ಸಮಾಜವಾದಿ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದರು. ಖ್ಯಾತ ಸಿನಿಮಾ ಸಾಹಿತಿ ಕ.ಬಂಗಾರಪ್ಪ ಅವರ ಶಿಷ್ಯರಾಗಿದ್ದರು. ಹರಿಯಪ್ಪ ನಾಯ್ಕ ಪತ್ನಿ, ಪುತ್ರ ಕವಿರಾಜ್ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಹರಿಯಪ್ಪ ನಾಯ್ಕ ಅವರ ಅಂತ್ಯಸಂಸ್ಕಾರ ಇಂದು ಮಧ್ಯಾಹ್ನ 12 ಗಂಟೆಗೆ ಮಂಡಗದ್ದೆ ಬಳಿ ಇರುವತ್ತಿಯಲ್ಲಿ ನಡೆಯಲಿದೆ. ಅಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. (ಎಂ.ಎನ್)

Leave a Reply

comments

Related Articles

error: