ಮೈಸೂರು

ಸೇವೆಗಳನ್ನು ಒದಗಿಸುತ್ತಿರುವ ವೈದ್ಯರು, ಶುಶ್ರೂಷಕರು ಹಾಗೂ ಆರೋಗ್ಯ ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನ

ಮೈಸೂರು,ಅ.15:- ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಉತ್ತಮವಾಗಿ ಕುಟುಂಬ ಕಲ್ಯಾಣ ಸೇವೆಗಳನ್ನು ಒದಗಿಸುತ್ತಿರುವ ವೈದ್ಯರು, ಶುಶ್ರೂಷಕರು ಹಾಗೂ ಆರೋಗ್ಯ ಸಂಸ್ಥೆಗಳಿಗೆ ಇಂದು ಜಿಲ್ಲಾ ಸನ್ಮಾನ ಮತ್ತು ಮಾಧ್ಯಮ ಕಾರ್ಯಾಗಾರವನ್ನು ಹಮ್ಮಿಕೊಂಡು ಪ್ರಶಸ್ತಿಯನ್ನು ವಿತರಿಸಲಾಯಿತು.

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಾಗಾರಕ್ಕೆ ವೇದಿಕೆ ಮೇಲಿದ್ದ ಗಣ್ಯರು ದೀಪ ಬೆಳಗಿ ಚಾಲನೆ ನೀಡಿದರು.  ಮೈಸೂರು ಜಿಲ್ಲೆಯ ಆಯ್ದ ಆರೋಗ್ಯ ಸಂಸ್ಥೆಗಳಾದ ಚೆಲುವಾಂಬಾ ಆಸ್ಪತ್ರೆ, ಟಿ.ನರಸೀಪುರ, ನಂಜನಗೂಡು, ಹುಣಸೂರು,  ಚಲುವಾಂಬ ಆಸ್ಪತ್ರೆ, ಹೆಚ್.ಡಿ.ಕೋಟೆ ಆಸ್ಪತ್ರೆಗಳಿಗೆ ಪ್ರಶಸ್ತಿ ನೀಡಲಾಯಿತು. ಜಿಲ್ಲೆಯಲ್ಲಿ ಉತ್ತಮವಾಗಿ ಕುಟುಂಬ ಕಲ್ಯಾಣ ಸೇವೇಗಳನ್ನು ಒದಗಿಸಿದ ವೈದ್ಯರಿಗೆ, ಶುಷ್ರೂಷಕರು ಹಾಗೂ ಆರೋಗ್ಯ ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನಿಸಲಾಯಿತು. ಪ್ರತಿ ಜಿಲ್ಲೆಯಿಂದ ಐದು ಸ್ಥಾನಗಳ ಆಯ್ಕೆ ಮಾಡಿ ಪ್ರಶಸ್ತಿ ವಿತರಿಸಲಾಗಿದ್ದು, ಮತ್ತಷ್ಟು ಉತ್ತಮ ಸೇವೆ ನೀಡಲು ಸಂಸ್ಥೆಗಳನ್ನು ಬಲಪಡಿಸುವ ಸಲುವಾಗಿ ಪ್ರಶಸ್ತಿ ಪ್ರದಾನಿಸಲಾಯಿತು.

ಕಾರ್ಯಕ್ರಮದಲ್ಲಿ ಡಿಎಚ್ ಓ ವೆಂಕಟೇಶ್, ಆರ್ ಸಿ ಎಚ್ ರವಿ ಮತ್ತಿತರರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: