ದೇಶ

ಪಿ.ಚಿದಂಬರಂ ವಿಚಾರಣೆಗೆ ತಿಹಾರ್ ಜೈಲು ತಲುಪಿದ ಇಡಿ ಅಧಿಕಾರಿಗಳು

ನವದೆಹಲಿ,ಅ.16- ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಇದೀಗ ತಿಹಾರ್ ಜೈಲಿನಲ್ಲಿರುವ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ವಿಚಾರಣೆಗೆ ಒಳಪಡಿಸಲು ಇಡಿ ಅಧಿಕಾರಿಗಳು ಇಂದು ತಿಹಾರ್ ಜೈಲಿಗೆ ಭೇಟಿ ನೀಡಿದ್ದಾರೆ.

ಇಡಿ ವಿಚಾರಣೆಯ ಹಿನ್ನೆಲೆಯಲ್ಲಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಮತ್ತು ಪತ್ನಿ ನಳಿನಿ ಚಿದಂಬರಂ ಸಹ ತಿಹಾರ್ ಜೈಲು ತಲುಪಿದ್ದಾರೆ.

ಇಡಿ ಕೂಡ ಚಿದಂಬರಂ ಅವರ ವಿಚಾರಣೆಗೆ ನ್ಯಾಯಾಲಯದ ಅನುಮತಿ ಕೋರಿತ್ತು. ಇಡಿ ಮನವಿಯನ್ನು ಪುರಸ್ಕರಿಸಿರುವ ದೆಹಲಿಯ ವಿಶೇಷ ನ್ಯಾಯಾಲಯ ತಿಹಾರ್‌ ಜೈಲಿನಲ್ಲಿಯೇ ಅಧಿಕಾರಿಗಳು ಅವರ ವಿಚಾರಣೆ ನಡೆಸಬಹುದು. ಅಗತ್ಯವೆನಿಸಿದರೆ ಅವರನ್ನು ಬಂಧಿಸಬಹುದು ಎಂದು ಹೇಳಿದೆ.

ಆ.21 ರಂದು ಚಿದಂಬರಂ ಅವರನ್ನು ಸಿಬಿಐ ಬಂಧಿಸಿತ್ತು. ಅದಿನಿಂದ ನ್ಯಾಯಾಂಗ ಬಂಧನದಲ್ಲಿರುವ ಪಿ.ಚಿದಂಬರಂ ಅವರನ್ನು ಅ.17ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. (ಎಂ.ಎನ್)

Leave a Reply

comments

Related Articles

error: