ವಿದೇಶ

ಮೆಕ್ಸಿಕೋದಲ್ಲಿ ಗುಂಡಿನ ದಾಳಿ: 15 ಮಂದಿ ಸಾವು

ಮೆಕ್ಸಿಕೋ ಸಿಟಿ,ಅ.16-ಗುಂಡಿನ ದಾಳಿಯಲ್ಲಿ 14 ನಾಗರಿಕರು ಮತ್ತು ಒಬ್ಬ ಮಿಲಿಟರಿ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಮೆಕ್ಸಿಕೊದ ದಕ್ಷಿಣ ರಾಜ್ಯವಾದ ಗೆರೆರೋದಲ್ಲಿ ನಡೆದಿದೆ.

ಇಗುವಾಲಾದಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಟೆಪೊಚಿಕಾ ಸಮುದಾಯದಲ್ಲಿ ಸಶಸ್ತ್ರಧಾರಿ ಗುಂಪು ಇರುವ ಬಗ್ಗೆ 911 ಕ್ಕೆ ಕರೆ ಬಂತು. ಈ ಪ್ರದೇಶಕ್ಕೆ ಭದ್ರತಾ ಸಿಬ್ಬಂದಿಯನ್ನು ಕಳುಹಿಸಲಾಯಿತು. ಭದ್ರತಾ ಪಡೆ ಅಲ್ಲಿಗೆ ತೆರಳಿದಾಗ ಸಶಸ್ತ್ರ ನಾಗರಿಕರು ಗುಂಡಿನ ದಾಳಿಯನ್ನು ಪ್ರಾರಂಭಿಸಿದರು. ಪರಿಣಾಮ ಮಿಲಿಟರಿ ಸಿಬ್ಬಂದಿ ಮತ್ತು 14 ಸಶಸ್ತ್ರ ನಾಗರಿಕರು ಸಾವನ್ನಪ್ಪಿದರು ಎಂದು ಗೆರೆರೋ ರಾಜ್ಯ ಭದ್ರತಾ ಅಧಿಕಾರಿಗಳ ವಕ್ತಾರ ರಾಬರ್ಟೊ ಅಲ್ವಾರೆಜ್ ಹೆರೆಡಿಯಾ ಮಂಗಳವಾರ ತಡರಾತ್ರಿ ಟ್ವಿಟ್ ಮಾಡಿದ್ದಾರೆ. (ಎಂ.ಎನ್)

Leave a Reply

comments

Related Articles

error: