ಮೈಸೂರು

ವಿರೋಧ ಪಕ್ಷದ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಭರ್ಜರಿ ಸ್ವಾಗತಕ್ಕೆ ಮೈಸೂರು ಕಾಂಗ್ರೆಸ್ ನಾಯಕರ ಚಿಂತನೆ : ಸಭೆ

ಮೈಸೂರು,ಅ.16:-  ರಾಜ್ಯ ವಿಧಾನ ಸಭಾ ವಿರೋಧ ಪಕ್ಷದ ನಾಯಕರಾದ ನಂತರ ಮೈಸೂರಿಗೆ ಆಗಮಿಸದ ಮಾಜಿ ಸಿಎಂ ಸಿದ್ದರಾಮಯ್ಯ ಮೊದಲ ಬಾರಿಗೆ ಮೈಸೂರಿಗೆ ಆಗಮಿಸುತ್ತಿದ್ದು, ಅವರನ್ನು ಅದ್ಧೂರಿಯಾಗಿ ಮೈಸೂರಿಗೆ  ಸ್ವಾಗತಿಸಲು ಇಂದು ಸಭೆ ನಡೆಯಿತು.

ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಸಭೆ ನಡೆದಿದ್ದು, ಮೈಸೂರು ಜಿಲ್ಲೆಯ ಎಲ್ಲಾ ಕಾಂಗ್ರೆಸ್ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅ.19 ರಂದು ಮೈಸೂರಿಗೆ ಆಗಮಿಸಲಿರುವ ಸಿದ್ದರಾಮಯ್ಯನವರನ್ನು  ಭರ್ಜರಿಯಾಗಿ ಸ್ವಾಗತಿಸಲು ಚಿಂತನೆ ನಡೆಸಲಾಗಿದ್ದು, ಬೃಹತ್ ಬೈಕ್ ರ್ಯಾಲಿ  ಹಾಗೂ   ಮೆರವಣಿಗೆ ಮೂಲಕ  ಸ್ವಾಗತಿಸಲು ಚಿಂತನೆ ನಡೆಸಲಾಗಿದೆ. ರಾಜ್ಯಕ್ಕೆ ಒಂದು ಸಂದೇಶ ರವಾನಿಸುವ ಸಲುವಾಗಿ ಭರ್ಜರಿ ಸ್ವಾಗತಕ್ಕೆ ಚಿಂತನೆ ನಡೆಸಲಾಗಿದ್ದು, ಈ ಸ್ವಾಗತಕ್ಕೆ ಸುಮಾರು ಹತ್ತು ಸಾವಿರ ಮಂದಿಯನ್ನು ಸೇರಿಸಲು ಕೈ ನಾಯಕರು ಪಣ ತೊಟ್ಟಿದ್ದಾರೆ. ಬೈಕ್ ರ್ಯಾಲಿ, ಜಾನಪದ ಕಲಾತಂಡಗಳು ಹಾಗೂ ಓಪನ್ ಜೀಪ್ ಮೂಲಕ ಸಿದ್ದರಾಮಯ್ಯನವರನ್ನು ಕರೆತರಲು ಕೈ ನಾಯಕರು ಸಿದ್ಧವಾಗಿದ್ದಾರೆ.

ಸಭೆಯಲ್ಲಿ  ಕಾರ್ಯಕ್ರಮದಲ್ಲಿ ಮಾಜಿ ಶಾಸಕರುಗಳಾದ ಎಂ.ಕೆ. ಸೋಮಶೇಖರ್, ವಾಸು, ಸಿ.ಹೆಚ್. ವಿಜಯ್ ಶಂಕರ್ ಮೇಯರ್ ಪುಷ್ಪಲತಾ ಜಗನ್ನಾಥ್ , ಮರಿಗೌಡ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: