ದೇಶಪ್ರಮುಖ ಸುದ್ದಿವಿದೇಶ

ಇನ್ಸ್ಟಾಗ್ರಾಮ್ನಲ್ಲಿ 21 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ವಿಶ್ವದ ಅತ್ಯಂತ ಸುಂದರ ಬಾಲಕಿ  : ವೈರಲ್

ದೇಶ(ನವದೆಹಲಿ)ಅ.16:- ರಷ್ಯಾದ ಆರು ವರ್ಷದ ಯಲಿನಾ ಯಾಕುಪೋವಾ ಎಂಬ ಬಾಲಕಿಯನ್ನು  ಅವರ ಅಭಿಮಾನಿಗಳು ವಿಶ್ವದ ಅತ್ಯಂತ ಸುಂದರ ಹೆಣ್ಣು ಮಗು ಎಂದು ಬಣ್ಣಿಸಿದ್ದಾರೆ.

ನಾಲ್ಕು ವರ್ಷದಿಂದ ಮಾಡೆಲಿಂಗ್ ಮಾಡುತ್ತಿರುವ ಈ ಮುದ್ದಾದ ಹೆಣ್ಣು ಮಗು ಅನೇಕ ವಿಧಗಳಲ್ಲಿ ಅಸಾಧಾರಣವಾಗಿದೆ.  ಇನ್ಸ್ಟಾಗ್ರಾಮ್ನಲ್ಲಿ 21 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದು,  ಸೋಷಿಯಲ್ ಮೀಡಿಯಾದಲ್ಲಿ ಜನರು ಇವಳನ್ನು ಮುದ್ದು ರಾಜಕುಮಾರಿ ಎಂದು ಬಣ್ಣಿಸುತ್ತಿದ್ದಾರೆ.

ಯಲಿನಾ ಅನೇಕ ಫ್ಯಾಷನ್ ಅಭಿಯಾನಗಳ  ಭಾಗವಾಗಿದ್ದು, ಮೊನಾಲಿಸಾ ಕಿಡ್ಸ್ ಮತ್ತು ಗ್ಲೋರಿಯಾ ಕಮೊಡಿಟೀಸ್‌ನಂತಹ ಅನೇಕ ಪ್ರಸಿದ್ಧ ಬ್ರಾಂಡ್‌ಗಳಿಗಾಗಿ ಅವರು ಪ್ರಚಾರ ಮಾಡಿದ್ದಾರೆ. ಮಾಸ್ಕೋದಲ್ಲಿ ವಾಸಿಸುವ ಯೆಲಿನಾ ತನ್ನ ನಗು ಮತ್ತು ಹೊಂಬಣ್ಣದ ಕೂದಲಿನಿಂದ ಎಲ್ಲರನ್ನೂ ಮೋಡಿ ಮಾಡುತ್ತಾಳೆ. ಯಲಿನಾ ಅವರ ವ್ಯವಸ್ಥಾಪಕರ ಪ್ರಕಾರ, ಕಳೆದ ಕೆಲವು ವರ್ಷಗಳಿಂದ ಅವರ ಜನಪ್ರಿಯತೆ ಹೆಚ್ಚಾಗಿದೆಯಂತೆ.  ಅವರ ಅಭಿಮಾನಿಗಳು ಜರ್ಮನಿ, ಅಮೇರಿಕನ್ ಮತ್ತು ಯುಕೆ ಸೇರಿದಂತೆ ವಿಶ್ವದಾದ್ಯಂತ ಇದ್ದಾರಂತೆ. ಈ ಹುಡುಗಿ ತಾನು ಬೆಳೆಯುತ್ತಿರುವ ಕುರಿತು ಅರಿತಿದ್ದು, ಆದ್ದರಿಂದ  ವಿಷಯಗಳನ್ನು ಅತ್ಯಂತ ವೃತ್ತಿಪರ ರೀತಿಯಲ್ಲಿ ನಿರ್ವಹಿಸುತ್ತಾಳಂತೆ. (ಎಸ್.ಎಚ್)

Leave a Reply

comments

Related Articles

error: