ಪ್ರಮುಖ ಸುದ್ದಿಮೈಸೂರು

ಕನ್ನಡ ಶಾಲೆ ಹೆಸರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಅಡ್ಡಿ : ಆರೋಪ

ಮೈಸೂರು, ಅ. 16 : ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಾಣಕ್ಕೆ ತಡೆಯೊಡ್ಡುವ ದುರುದ್ದೇಶದಿಂದಾಗಿ ಪರೋಕ್ಷವಾಗಿ ಕನ್ನಡ ಶಾಲೆ ಹೆಸರಿನಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದು ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ ಮೈ.ಕಾ.ಪ್ರೇಮ್ ಕುಮಾರ್ ಟೀಕಿಸಿದರು.

ಸಾವಿರಾರು ‌ಮಕ್ಕಳಿರುವ ಲಕ್ಷ್ಮೀಪುರಂ ಕನ್ನಡ ಶಾಲೆ. ನಂಜರಾಜ ಬಹದ್ದೂರ್ ಛತ್ರೆ ಆವರಣದಲ್ಲಿದ್ದ ಮಾದರಿ ಕನ್ನಡ ಶಾಲೆ. ಕೊತ್ವಾಲ್ ರಾಮಯ್ಯ ರಸ್ತೆಯ ಸೌಧೆ ಡಿಪೋ ಮೃಗಾಲಯ ಸೇರಿದಂತೆ ಹಲವು ಕನ್ನಡ ಶಾಲೆಗಳು ಮುಚ್ಚಲ್ಪಟ್ಟಿದ್ದರು ಆದರೆ ಈ ಬಗ್ಗೆ ಧ್ವನಿ ಎತ್ತದ ಪ್ರಗತಿಪರರು, ಸಂಘಟನೆಗಳು, ಸಂಘ ಸಂಸ್ಥೆಗಳು ಈಗ ನಡೆಸುತ್ತಿರುವ ಹೋರಾಟ ಅನುಮಾನಕ್ಕೀಡು ಮಾಡಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸ್ವಾಮಿ ವಿವೇಕಾನಂದ ಸ್ಮಾರಕ ನಿರ್ಮಿಸಲು  ಎನ್.ಟಿ.ಎಂ.ಎಸ್ ಶಾಲೆಯಿರುವ ಜಾಗವನ್ನು ರಾಮಕೃಷ್ಣ ಮಿಷನ್ ಗೆ ಮಂಜೂರು ಮಾಡಿದೆ, ಇದನ್ನು ತಡೆಯುವ ನಿಟ್ಟಿನಲ್ಲಿ ಕನ್ನಡ ಶಾಲೆ ಹೆಸರಿನಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಈ ಚಳುವಳಿಗಳನ್ನು ಕೈ ಬಿಟ್ಟು ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಾಣಕ್ಕೆ ಕೈ ಜೋಡಿಸಿ ಎಂದು ಮನವಿ ಮಾಡಿದರು.

ವೇದಿಕೆಯ ಎಂ.ಎ. ಮೋಹನ್ ಅವರು ಗೋಷ್ಠಿಯಲ್ಲಿ ಭಾಗಿಯಾಗಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: