ದೇಶಪ್ರಮುಖ ಸುದ್ದಿ

ನಾಳೆ ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರ: ಶೇ .90ರಷ್ಟು ಬ್ಯಾಂಕ್‍ ಬಂದ್

ನವದೆಹಲಿ: ಸ್ಟೇಟ್‍ ಬ್ಯಾಂಕ್ ಆಫ್ ಇಂಡಿಯಾ ಜತೆ ಇತರೆ ಸ್ಟೇಟ್ ಬ್ಯಾಂಕ್‍ಗಳ ವಿಲೀನ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಿಬ್ಬಂದಿ ನಾಳೆ (ಫೆ.28) ದೇಶವ್ಯಾಪಿ ಮುಷ್ಕರ ನಡೆಸಲಿವೆ.

ಹಲವು ಬೇಡಿಕೆಗಳಲ್ಲಿ ನೋಟು ನಿಷೇಧದ ಸಮಯದಲ್ಲಿ ನಿರ್ವಹಿಸಿದ ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ಭತ್ಯೆ ನೀಡಬೇಕು ಎಂಬ ಬೇಡಿಕೆಯೂ ಸೇರಿದೆ. ದೆಹಲಿಯಲ್ಲಿ ಫೆ.21ರಂದು ಕೇಂದ್ರ ಸರ್ಕಾರದ ಮುಖ್ಯ ಕಾರ್ವಿುಕ ಆಯುಕ್ತರ ಸಮ್ಮುಖದಲ್ಲಿ ಏರ್ಪಟ್ಟ ಸಂಧಾನ ಸಭೆ ವಿಫಲಗೊಂಡಿದ್ದರಿಂದ ಮುಷ್ಕರಕ್ಕೆ ಕರೆ ನೀಡಲಾಗಿದೆ.

ಈ ಸಮಯ ಬ್ಯಾಂಕಿಂಗ್ ಸೇವೆ ಲಭ್ಯವಿಲ್ಲವಾಗಿದ್ದು, ಎಟಿಎಂ ಸೇವೆಯಲ್ಲೂ ಏರುಪೇರು ಉಂಟಾಗುವ ಸಾಧ್ಯತೆ ಇದೆ. ಯುಎಫ್‍ಬಿಯು ಅಡಿ ಬರುವ ಒಟ್ಟು 9 ಬ್ಯಾಂಕ್ ಸಂಘಟನೆಗಳು ಮುಷ್ಕರವನ್ನು ಬೆಂಬಲಿಸಿವೆ. ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ಬ್ಯಾಂಕ್ ಸಿಬ್ಬಂದಿ ನಾಳೆ ಕೆಲಸಕ್ಕೆ ಗೈರು ಹಾಜರಾಗಲಿದ್ದಾರೆ.

ಭಾರತೀಯ ಮಜ್ದೂರ್ ಸಂಘಕ್ಕೆ ಸೇರಿದ ಬ್ಯಾಂಕ್ ನೌಕರರ ರಾಷ್ಟ್ರೀಯ ಸಂಘಟನೆ ಹಾಗೂ ಬ್ಯಾಂಕ್ ಅಧಿಕಾರಿಗಳ ರಾಷ್ಟ್ರೀಯ ಸಂಘಟನೆ ನಾಲೆಯ ಮುಷ್ಕರದಿಂದ ದೂರ ಉಳಿದಿದ್ದು, ಬಾಹ್ಯ ಬೆಂಬಲ ಸೂಚಿಸಿದೆ.

ಶೇ.90ರಷ್ಟು ಬ್ಯಾಂಕ್‍ಗಳು ಬಂದ್ :

ಕರ್ನಾಟಕ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಗ್ರೂಪ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಐಡಿಬಿಐ ಬ್ಯಾಂಕ್, ಕೆನರಾ ಬ್ಯಾಂಕ್, ಕಾಪೋರೇಷನ್ ಬ್ಯಾಂಕ್, ಎಸ್​ಬಿಐ, ಎಸ್​ಬಿಎಂ, ಬ್ಯಾಂಕ್ ಆಫ್ ಬರೋಡಾ, ಸೇರಿ ಎಲ್ಲ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹವರ್ತಿ ಬ್ಯಾಂಕ್​ಗಳು ಸೇರಿ ಶೇ.90 ಬ್ಯಾಂಕ್​ಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ. ಕೊಟಕ್ ಮಹೀಂದ್ರ, ಎಚ್​ಡಿಎಫ್​ಸಿ, ಐಸಿಐಸಿಐ, ಆಕ್ಸಿಸ್, ಸೇರಿದಂತೆ ಹೊಸ ಬ್ಯಾಂಕ್​ಗಳು ಎಂದಿನಂತೆ ಕೆಲಸ ನಿರ್ವಹಿಸಲಿವೆ.

ಬೇಡಿಕೆಗಳಲ್ಲಿ ಕೆಲವು ಮುಖ್ಯ ಅಂಶಗಳು :

> 20 ಲಕ್ಷ ರೂ. ಗ್ರ್ಯಾಚುಟಿ ಕಾಯ್ದೆಗೆ ತಿದ್ದುಪಡಿ ಮಾಡಿ ಪೂರ್ವಾನ್ವಯವಾಗುವಂತೆ 20 ಲಕ್ಷ ರೂ. ಸಿಗುವಂತೆ ನಿಯಮ ಬದಲಿಸಬೇಕು.

> ಗ್ರ್ಯಾಚುಟಿ ಮೇಲಿನ ತೆರಿಗೆ ವಾಪಸ್ ಪಡೆಯಬೇಕು, ಐಡಿಬಿಐ ಬ್ಯಾಂಕ್​ಗಳ ವೇತನ ಪರಿಷ್ಕರಣೆ ಮಾಡಬೇಕು.

> ನೋಟ್​ ಬ್ಯಾನ್​​ ವೇಳೆ ನಿರ್ವಹಿಸಿದ ಹೆಚ್ಚುವರಿ ಕೆಲಸಕ್ಕೆ ವಿಶೇಷ ಭತ್ಯೆಗೆ ನೀಡಬೇಕು.

> ಸ್ಟೇಟ್​​ ಬ್ಯಾಂಕ್ ಆಫ್ ಇಂಡಿಯಾ ಜತೆ ಸಹವರ್ತಿ ಬ್ಯಾಂಕ್​ಗಳ ವಿಲನಕ್ಕೆ ತೀವ್ರ ವಿರೋಧ.

> ಹೊರಗುತ್ತಿಗೆ ಹೆಚ್ಚಳ ಮಾಡುವ ನಿರ್ಧಾರ ಕೈಬಿಡಬೇಕು.

> ಹೊಸ ಕಾರ್ವಿುಕ ನೀತಿಗೆ ತೀವ್ರ ವಿರೋಧ.

> ವಸೂಲಾಗದ ಸಾಲಕ್ಕೆ ಉನ್ನತ ಅಧಿಕಾರಿಗಳ ಹೊಣೆಗಾರಿಕೆ.

Leave a Reply

comments

Related Articles

error: