ಮೈಸೂರು

ಜೂಜು ಅಡ್ಡೆಯ ಮೇಲೆ ದಾಳಿ : ಎಂಟು ಮಂದಿ ಬಂಧನ

ಜೂಜುಅಡ್ಡೆಯ ಮೇಲೆ ದಾಳಿ ನಡೆಸಿದ ಮೈಸೂರು ಡಿಸಿಐಬಿ ಪೊಲೀಸರು ಎಂಟು ಮಂದಿಯನ್ನು ಬಂಧಿಸಿ, 31,100ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ.

ಮೈಸೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಹೂಟಗಳ್ಳಿ ತೋಟದ ಮನೆಯೊಂದರಲ್ಲಿ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇಲೆ ದಾಳಿ ನಡೆಸಿದ ಪೊಲೀಸರು ಜೂಜಾಟ ನಡೆಸಿದ್ದ ಪುಟ್ಟಸ್ವಾಮಿ, ಮಂಜು, ಮಂಜುನಾಥ, ಪದ್ಮನಾಭ, ಅರುಣ, ಶ್ರೀನಿವಾಸ ಸೇರಿದಂತೆ ಇನ್ನಿಬ್ಬರನ್ನು ಬಂಧಿಸಿದ್ದು, ಅವರು ಪಣಕ್ಕಿಟ್ಟಿದ್ದ ಮೂರು ಬೈಕ್ ಗಳು, ಹಾಗೂ 31,100ರೂ.ನಗದನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ.

ಮೈಸೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ದಾಳಿ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಬಚ್ಚೇಗೌಡ, ಪ್ರಭಾಕರ, ದೇವರಾಜು ಮತ್ತಿತರರು ಪಾಲ್ಗೊಂಡಿದ್ದರು.

Leave a Reply

comments

Related Articles

error: