ಮನರಂಜನೆ

ಇತಿಹಾಸ ರಚಿಸಿದ ಬಾಲಿವುಡ್ ನಟರಾದ ಹೃತಿಕ್ ರೋಷನ್, ಟೈಗರ್ ಶ್ರಾಫ್ ನಟಿಸಿದ ‘ವಾರ್’ : ಗಳಿಸಿದ್ದೆಷ್ಟು ಗೊತ್ತಾ?

ದೇಶ(ನವದೆಹಲಿ)ಅ.17:-  ಬಾಲಿವುಡ್ ನಟರಾದ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ನಟಿಸಿರುವ ‘ವಾರ್’ ಸಾರ್ವಕಾಲಿಕ ಅತಿ ಹೆಚ್ಚು ಗಳಿಸಿದ 10 ನೇ ಹಿಂದಿ ಚಿತ್ರವಾಗಿದೆ.   ಆಕ್ಷನ್-ಥ್ರಿಲ್ಲರ್ ಚಿತ್ರ ‘ವಾರ್’ ಇದುವರೆಗೆ 2019 ರಲ್ಲಿ ಬಿಡುಗಡೆಯಾದ ಚಿತ್ರಗಳಲ್ಲಿ ಅತಿ ಹೆಚ್ಚು ಗಳಿಕೆ ಕಂಡಿದೆ. ಗಳಿಕೆಯ ದೃಷ್ಟಿಯಿಂದ ‘ವಾರ್’ ಸಹ ‘ಕಬೀರ್ ಸಿಂಗ್’ ಮತ್ತು ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಅನ್ನು ಮೀರಿಸಿದೆ.

ಚಲನಚಿತ್ರ ವ್ಯವಹಾರ ವಿಶ್ಲೇಷಕ ತರಣ್ ಆದರ್ಶ್ ಅವರ ಪ್ರಕಾರ, ‘ವಾರ್’ ಒಟ್ಟು 280.60 ಕೋಟಿ ರೂ. ಗಳಿಸಿದೆ, ಇದರಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಆವೃತ್ತಿಗಳ ಸಂಗ್ರಹವಿದೆ. ಟ್ರೇಡ್ ಪಂಡಿತರ ಪ್ರಕಾರ, ಈ ಚಿತ್ರ ಶೀಘ್ರದಲ್ಲೇ 300 ಕೋಟಿ ಗಡಿ ದಾಟಲಿದೆ ಎನ್ನಲಾಗಿದೆ.

‘ವಾರ್’ ಹಿಂದಿ ಚಿತ್ರದಲ್ಲಿ ಅತಿ ಹೆಚ್ಚು ಗಳಿಸಿದ 10 ನೇ ಚಿತ್ರವಾಗಿದೆ ಎಂದು ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ. 1. ‘ಬಾಹುಬಲಿ 2’ (ಹಿಂದಿ), 2. ‘ದಂಗಲ್’, 3. ‘ಸಂಜು’, 4. ‘ಪಿ.ಕೆ. ‘, 5.’ ಟೈಗರ್ ಜಿಂದಾ ಹೈ ‘, 6.’ ಬಜರಂಗಿ ಭಾಯಿಜಾನ್ ‘, 7.’ ಪದ್ಮಾವತ್ ‘, 8.’ ಸುಲ್ತಾನ್ ‘, 9.’ ಧೂಮ್ 3 ‘, 10.’ ವಾರ್ ‘  ಕಬೀರ್ ಸಿಂಗ್ ’11 ನೇ ಸ್ಥಾನ ‘ಉರಿ ,ದಿ ಸರ್ಜಿಕಲ್ ಸ್ಟ್ರೈಕ್’ ಪಟ್ಟಿಯಲ್ಲಿ 12 ನೇ ಸ್ಥಾನದಲ್ಲಿದೆ. ” ಎರಡನೇ ವಾರದಲ್ಲಿ ‘ವಾರ್’  ಚಿತ್ರ  ಶುಕ್ರವಾರ 7.10 ಕೋಟಿ, ಶನಿವಾರ 11.20 ಕೋಟಿ, ಭಾನುವಾರ 13.20 ಕೋಟಿ, ಸೋಮವಾರ 4.40 ಕೋಟಿ, ಮಂಗಳವಾರ 3.90 ಕೋಟಿ ಗಳಿಸಿದೆ. ಹಿಂದಿಯಲ್ಲಿ 268.30 ಕೋಟಿ ರೂ. ಗಳಿಸಿದ್ದು, ಈ ಚಿತ್ರವು ತಮಿಳು ಮತ್ತು ತೆಲುಗು ಆವೃತ್ತಿಗಳು ಸೇರಿದಂತೆ ಒಟ್ಟು 280.60 ಕೋಟಿ ರೂ.ಗಳಿಸಿದೆ.

ಕೊಯಿಮೊಯಿ ಡಾಟ್ ಕಾಮ್ ಪ್ರಕಾರ, ಶಾಹಿದ್ ಕಪೂರ್ ಅಭಿನಯದ ‘ಕಬೀರ್ ಸಿಂಗ್’ 278.24 ಕೋಟಿ ರೂ. ಮತ್ತು ವಿಕ್ಕಿ ಕೌಶಲ್ ಅವರ ‘ಉರಿ- ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರದ ವಹಿವಾಟು 244.06 ಆಗಿದೆ.

ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರ ಮೊದಲ ದಿನ 53.35 ಕೋಟಿ ರೂ ಗಳಿಸಿದ್ದು, 4200 ಸ್ಕ್ರೀನ್ ಗಳಲ್ಲಿ ತೆರೆ ಕಂಡಿದೆ. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ವಾಣಿ ಕಪೂರ್ ಕೂಡ ನಟಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: