ಮೈಸೂರು

ಸದ್ಯದಲ್ಲೇ ಪಾಲಿಕೆಯಿಂದ ಕರ ಸಂಗ್ರಹ ಆಂದೋಲನ

ನೀರಿನ ತೆರಿಗೆ ವಸೂಲಿ ಮತ್ತು ಆಸ್ತಿ ಕಂದಾಯದ ನಿಟ್ಟಿನಲ್ಲಿ ಆಗಸ್ಟ್ 29 ರಿಂದ ಒಂದು ವಾರಗಳ ಕಾಲ ಕಂದಾಯ ಮತ್ತು ತೆರಿಗೆ ವಸೂಲಿ ಆಂದೋಲನ ನಡೆಸಲಾಗುವುದು ಎಂದು ಮಹಾನಗರ ಪಾಲಿಕೆ ಮೇಯರ್ ಬಿ.ಎಲ್.ಭೈರಪ್ಪ ಹೇಳಿದ್ದಾರೆ.

ಹಣಕಾಸು ಸ್ಥಾಯಿ ಸಮಿತಿ ವತಿಯಿಂದ ಪಾಲಿಕೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಪಾಲಿಕೆ ಹಣಕಾಸಿನ ತೊಂದರೆಯನ್ನು ಅನುಭವಿಸುತ್ತಿದೆ. 140 ಕೋಟಿ ಆಸ್ತಿ ತೆರಿಗೆ ಮತ್ತು 100 ಕೋಟಿ ನೀರಿನ ತೆರಿಗೆ ಬಾಕಿ ಇದೆ. ತೆರಿಗೆ ಸಂಗ್ರಹದಲ್ಲಿ ಒಂದು ತಿಂಗಳೊಳಗೆ ಸುಧಾರಣೆಯಾಗಬೇಕು ಇಲ್ಲದಿದ್ದರೆ ಕ್ರಮ ಜರುಗಿಸುವುದು ಅನಿವಾರ್ಯ ಎಂದರು.

ಪ್ರಸಕ್ತ ಸಾಲಿನ ಬಾಕಿ ಕಂದಾಯವನ್ನು ಸಂಗ್ರಹಿಸಲಾಗುವುದು. ಹಿಂದಿನ ವರ್ಷಗಳ ಕಂದಾಯವನ್ನು ಕಂತಿನ ಮೂಲಕ ಕಟ್ಟಲು ಅವಕಾಶ ಕಲ್ಪಿಸಲಾಗುವುದು. ತೆರಿಗೆ ಕಟ್ಟಲು ವಿಫಲರಾದಲ್ಲಿ ತಕ್ಷಣ ನೀರು ಪೂರೈಕೆ ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಬಾಲು ಮಾತನಾಡಿ, ಕಂದಾಯ ಅಧಿಕಾರಿಗಳಾದ ರಾಘವೇಂದ್ರ, ರಾಜು, ಆದರ್ಶಕುಮಾರ ತೆರಿಗೆ ಕಟ್ಟದೆ ಬಾಕಿ ಉಳಿದವರಿಗೆ ಈಗಾಗಲೇ ನೋಟೀಸ್ ಕಳಿಸಿರುತ್ತಾರೆ ಎಂದರು.

Leave a Reply

comments

Related Articles

error: