ಲೈಫ್ & ಸ್ಟೈಲ್

ಹೇಗೆ ಮಲಗಿದರೇನು ಎಂಬ ಉದಾಸೀನತೆ ಬೇಡ

ಬೆಳಿಗ್ಗೆ ಏಳುವಾಗಲೇ ಕೆಲವೊಮ್ಮೆ ತಲೆನೋವು, ಹೊಟ್ಟೆನೋವು, ಕುತ್ತಿಗೆನೋವುಗಳು ಕಾಣಿಸಿಕೊಳ್ಳುತ್ತವೆ. ಆದರೆ ಇವೆಲ್ಲ ಯಾಕೆ ಬಂತು ಎನ್ನುವುದರ ಕುರಿತು ನಾವು ಗಮನ ಹರಿಸುವುದಿಲ್ಲ.  ಹೇಗೆ ಮಲಗಿದರೇನು ಎಂದು ನಮಗೆ ಮನಬಂದಂತೆ  ಹಲವು ಭಂಗಿಗಳಲ್ಲಿ ಮಲಗುತ್ತೇವೆ ಆದರೆ ಅದು ತಪ್ಪು. ಹಲವು ತಪ್ಪು ಭಂಗಿಗಳು ನಮ್ಮ ಆರೋಗ್ಯಕ್ಕೆ ಕುತ್ತು ತರಬಹುದು. ಆದರೆ ತಪ್ಪಿಯೂ ಕುತ್ತು ತರುವ ರೀತಿಯ ಭಂಗಿಗಳಲ್ಲಿ ಮಲಗಿ ಆರೋಗ್ಯ ಹಾಳುಮಾಡಿಕೊಳ್ಳದಿರಿ.

ಹೊಟ್ಟೆಗೆ ಬಲಕೊಟ್ಟು ಮಲಗುವುದು : ತಪ್ಪಿಯೂ ಹೊಟ್ಟೆಗೆ ಬಲಕೊಟ್ಟು ಮಲಗದಿರಿ. ಮಲಗುವ ಈ ಭಂಗಿಯು ಆರೋಗ್ಯದ ಮೇಲೆ ತೀರಾ ಕೆಟ್ಟ ಪರಿಣಾಮ ಬೀರಲಿದೆ. ಇದರಲ್ಲಿ ತಲೆ, ಕತ್ತು, ಎಲುಬುಗಳು ಸರಿಯಾದ ರೀತಿ ಇರದ ಕಾರಣ ಕುತ್ತಿಗೆ, ತಲೆ, ಬೆನ್ನಿನ ಹಿಂಭಾಗದಲ್ಲಿ ನೋವುಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ.

ಅಂಗಾತ ಮಲಗುವಿಕೆ : ನಿದ್ರೆಯ ಸಮಯದಲ್ಲಿ ಈ ರೀತಿ ಮಲಗುವುದು ಉತ್ತಮ ಎಂದು ಹೇಳಲಾಗುತ್ತದೆ. ಇದರಿಂದ ತಲೆ, ಕುತ್ತಿಗೆ ಮತ್ತು ಬೆನ್ನಿನ ಎಲುಬುಗಳು ಸಮಸ್ಥಿತಿಯಲ್ಲಿರುತ್ತವೆ. ಇದರಿಂದ ತಲೆನೋವು, ಕತ್ತು ನೋವು, ಬೆನ್ನುನೋವುಗಳು ನಿಯಂತ್ರಣದಲ್ಲಿರುತ್ತವೆ.

ಬಿಂದಾಸ್ ಆಗಿ ಮಲಗುವುದು : ಇದು ಕೂಡಾ  ಉತ್ತಮ ಭಂಗಿಯಾಗಿದೆ. ಕಾಲುಗಳನ್ನು ಹರಡಿ, ಕೈಗಳನ್ನು ಮಡಚಿ ತಲೆಯ  ಅಡಿ ಇಟ್ಟು ಮಲಗುವುದರಿಂದ  ಒತ್ತಡ, ಮತ್ತು ಮಾಂಸಖಂಡಗಳ ನೋವು ನಿವಾರಣೆಯಾಗಲಿದೆ.

ಮೊಣಕಾಲುಗಳ ಮೇಲೆ ಮೊಣಕೈ ಊರಿ ಮಲಗುವುದು : ಕೆಲವರು ಮೊಣಕಾಲುಗಳನ್ನು ಮಡಚಿ ಮೇಲಕ್ಕೆ ತಂದು ಅದಕ್ಕೆ ಮೊಣಕೈಗಳನ್ನು ಊರಿ ಮಲಗುತ್ತಾರೆ. ತಪ್ಪಿಯೂ ಹೀಗೆ ಮಾಡದಿರಿ. ಹೀಗೆ ಮಾಡುವುದು ಆರೋಗ್ಯದ ದೃಷ್ಟಿಯಲ್ಲಿ ಒಳ್ಳೆಯದಲ್ಲ. ಇದರಿಂದ ಕತ್ತು ಹಾಗೂ ಹೊಟ್ಟೆನೋವು ಬರುವುದಲ್ಲದೇ, ಎದೆಗೂ ಹಾನಿಕರವಾಗಲಿದೆ.

ಶರೀರದ ಎಡಭಾಗದಲ್ಲಿ ಮಲಗುವುದು : ಇದು ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಈ ರೀತಿ ಮಲಗುವುದರಿಂದ ಆ್ಯಸಿಡಿಟಿ ಆಗಲಾರದು. ಕುತ್ತಿಗೆ ನೋವು, ತಲೆನೋವುಗಳು ಕಡಿಮೆಯಾಗಲಿದೆ. ಕುತ್ತಿಗೆಗೆ ಮತ್ತು ಹೊಟ್ಟೆಗೆ ಆರಾಮದಾಯಕವೆನಿಸಲಿದೆ.

 

 

Leave a Reply

comments

Related Articles

error: