
ಮೈಸೂರು
ನಾಳೆಯಿಂದ 33ನೇ ಚಿಗುರು ಸಂಜೆ
ಮೈಸೂರು.ಅ.17 : ವಸುಂಧರಾ ಫಾರ್ಮಿಂಗ್ ಆರ್ಟ್ಸ್ ಸೆಂಟರ್ ವತಿಯಿಂದ 33ನೇ ಆವೃತ್ತಿಯ ಚಿಗುರು ಸಂಜೆ 2019 ಅನ್ನು ಅ.18 ಮತ್ತು 19ರಂದು ಕೆ.ವಿ.ರಸ್ತೆಯ ಜೆ.ಎಂ.ಪ್ಯಾಲೇಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿ.18ರ ಸಂಜೆ 6 ಗಂಟೆಗೆ ಕರ್ನಾಟಕ ಮುಕ್ತಕ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಪ್ರೊ.ಎಸ್.ರಾಮಪ್ರಸಾದ್ ಉದ್ಘಾಟಿಸುವರು. ನಂದಿನಿ ನೃತ್ಯಾಲಯ ಟ್ರಸ್ಟ್ ನಿರ್ದೇಶಕರಾದ ವಿದ್ವಾನ್ ಕಣ್ಣನ್ ಅವರ ಸನ್ಮಾನ. ಕೇಂದ್ರದ ಅಧ್ಯಕ್ಷರಾದ ಕೆ.ವಿ.ಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.
ದಿ.6ರಿಂದ 9ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ನೃತ್ಯಾಲಯ ಸ್ಕೂಲ್ ಆಫ್ ಡ್ಯಾನ್ಸ್ ನಿರ್ದೇಶಕ ಡಾ.ತುಳಸಿ ರಾಮಚಂದ್ರ ದೀಪ ಬೆಳಗಿಸುವರು. ಸಿತಾರ್ ವಾದಕ ಪಂಡಿತ್ ಸರೋಜ್ ಮುಖರ್ಜಿಯವರನ್ನು ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ಕೇಂದ್ರದ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. (ಕೆ.ಎಂ.ಆರ್)