
ಪ್ರಮುಖ ಸುದ್ದಿ
20 ಸಾವಿರ ಲಂಚಕ್ಕೆ ಬೇಡಿಕೆ : ಎಸಿಬಿ ಬಲೆಗೆ ಬಿದ್ದ ಚಾಮರಾಜನಗರ ಎಇಇ
ರಾಜ್ಯ(ಚಾಮರಾಜನಗರ)ಅ.18:- ಗುತ್ತಿಗೆದಾರನಿಂದ 20 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟ ನಗರಸಭೆ ಎಇಇ ಎಸಿಬಿ ಬಲೆಗೆ ಬಿದ್ದ ಘಟನೆ ನಗರದಲ್ಲಿ ನಡೆದಿದೆ.
ಸತ್ಯಮೂರ್ತಿ ಲಂಚಕ್ಕೆ ಬೇಡಿಕೆಯಿಟ್ಟ ಅಧಿಕಾರಿ. ಶೋಯಬ್ ಖಾನ್ ಎಂಬ ಗುತ್ತಿಗೆದಾರನಿಗೆ ಎಸ್ ಎಫ್ ಡಿ ಹಣ ಬಿಡುಗಡೆ ಮಾಡಲು 20 ಸಾವಿರ ರೂ. ಲಂಚ ಕೇಳಿದ್ದರು ಎನ್ನಲಾಗಿದೆ.
ಲಂಚಕ್ಕೆ ಬೇಡಿಕೆ ಇಡುವುದನ್ನು ಶೋಯಬ್ ಖಾನ್ ಎಸಿಬಿಗೆ ದೂರು ನೀಡಿ ಹಣ ನೀಡುವ ನೆಪದಲ್ಲಿ ಮಿಕವನ್ನು ಬಲೆಗೆ ಕೆಡವಿದ್ದಾರೆ. ಎಸಿಬಿ ಡಿವೈಎಸ್ಪಿ ಸದಾನಂದ ತಿಪ್ಪಣ್ಣ, ಸಿಪಿಐ ಶ್ರೀಕಾಂತ್, ದೀಪಕ್ ನೇತೃತ್ವದಲ್ಲಿ ದಾಳಿ ನಡೆದಿದೆ. (ಕೆ.ಎಸ್,ಎಸ್.ಎಚ್)