ಪ್ರಮುಖ ಸುದ್ದಿಮೈಸೂರು

ವಿಶ್ವನಾಥ್- ಸಾರಾ ಮಹೇಶ್ ಆಣೆ ಪ್ರಮಾಣ ವಿಚಾರ : ವಿಶ್ವನಾಥ್ ಬಗ್ಗೆ ಮಾತನಾಡದೇ ಇರೋದೇ ಒಳ್ಳೆಯದೆಂದು ಮಹೇಶ್ ಗೆ ಸಲಹೆ ನೀಡಿದ್ದೇನೆ ; ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ

ಮೈಸೂರು,ಅ.18 :- ವಿಶ್ವನಾಥ್- ಸಾರಾ ಮಹೇಶ್ ಆಣೆ ಪ್ರಮಾಣ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ವಿಶ್ವನಾಥ್ ಬಗ್ಗೆ ಮಾತನಾಡದೇ ಇರೋದೇ ಒಳ್ಳೆಯದು ಎಂದಿದ್ದಾರೆ.

ಮೈಸೂರಿನಲ್ಲಿಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ಸಾರಾ ಮಹೇಶ್ ಗೆ ನಾನು ಸಲಹೆ ಕೊಟ್ಟಿದ್ದೇನೆ. ಆ ವ್ಯಕ್ತಿಯ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರ. ಆಣೆ ಪ್ರಮಾಣ ಏತಕ್ಕಾಗಿ ಬೇಕು? ದುಡ್ಡು ಕೊಟ್ಟವರು ಬರ್ತಾರಾ, ಬರೋಕೆ ಸಾಧ್ಯವಾ? ದೇಶದಲ್ಲಿ ತ್ಯಾಗ ಮಾಡಿ ಜನಪರ ಸರ್ಕಾರ ಮಾಡುವುದಕ್ಕೆ ಇವರು ಹೋಗಿದ್ದಾರಾ? ಆ ವ್ಯಕ್ತಿ ಮುಖವಾಡಕ್ಕೆ ಮುಂದಿನ ದಿನಗಳಲ್ಲಿ ಜನರೇ ತೀರ್ಮಾನ ಕೈಗೊಳ್ಳುತ್ತಾರೆ. ಹೀಗಾಗಿ ಆ ವ್ಯಕ್ತಿಯ ಬಗ್ಗೆ ಚರ್ಚೆ ಅನಗತ್ಯವೆಂದು ತಿಳಿಸಿದ್ದೇನೆ ಎಂದರು.

ಹುಣಸೂರು ಬೈ ಎಲೆಕ್ಷನ್ ವಿಚಾರಕ್ಕೆ ಪ್ರತಿಕ್ರಿಯಿಸಿ ಚುನಾವಣೆಯಲ್ಲಿ ಪಕ್ಷದಿಂದ ಅಭ್ಯರ್ಥಿಯನ್ನು ನಿಲ್ಲಿಸುತ್ತೇವೆ. ಸೋಲು ಗೆಲುವು  ಎರಡನ್ನೂ ಸ್ವೀಕಾರ ಮಾಡಿದ್ದೇವೆ. ಚುನಾವಣೆಯಲ್ಲಿ ಗೆಲ್ಲುವಂತಹ ಶಕ್ತಿ ಕಾರ್ಯಕರ್ತರಲ್ಲಿ ಇದೆ. ಜನರು ಆ ತೀರ್ಮಾನಕ್ಕೆ ಬರುವ ಅಭಿಪ್ರಾಯ ಇದೆ ಎಂದರು.

ವಿಜಯಪುರದಲ್ಲಿ ಆಸ್ಪತ್ರೆ ಹೊರಭಾಗದಲ್ಲಿ ಗರ್ಭಿಣಿ ಹೆರಿಗೆ ಪ್ರಕರಣಕ್ಕೆ ಪ್ರತಿಕ್ರಿಯಿಸಿ ಇದು ಬರಿ ಸರ್ಕಾರ ಮಾತ್ರವಲ್ಲ ಎಲ್ಲ ಜನಪ್ರತಿನಿಧಿಗಳು ತಲೆ ತಗ್ಗಿಸುವ ವಿಚಾರ. ಆರೋಗ್ಯ ಇಲಾಖೆ ಕಟ್ಟಡ ಕಟ್ಟಲು ಕೊಡುವ ಆಸಕ್ತಿಯನ್ನು ಸಿಬ್ಬಂದಿ ನೇಮಕಾತಿಗೆ ನೀಡುತ್ತಿಲ್ಲ. ಇದರಿಂದಾಗಿಯೇ ವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಿ. ಆರೋಗ್ಯ ಇಲಾಖೆ ವ್ಯವಸ್ಥೆ ಸರಿಪಡಿಸಲಿ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: