ಕರ್ನಾಟಕಪ್ರಮುಖ ಸುದ್ದಿ

ಶ್ರೀರಾಮುಲು ವಿರುದ್ಧ ಕರುಣಾಕರ ರೆಡ್ಡಿ ವಾಗ್ದಾಳಿ

ಬಳ್ಳಾರಿ : ಬಿಎಸ್ಆರ್ ಪಕ್ಷ ಸ್ಥಾಪಿಸಿದ್ದ ವೇಳೆ ಬೆಂಬಲ ನೀಡಲಿಲ್ಲ ಎಂಬ ಕಾರಣಕ್ಕೆ ಶ್ರೀರಾಮುಲು ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಎಂದು ಕರುಣಾಕರ ರೆಡ್ಡಿ ಆರೋಪಿಸಿದ್ದಾರೆ.

ಬಳ್ಳಾರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಮೊದಲು ಬಿಜೆಪಿ ಸೇರಿದವನು ನಾನು, ರಾಮುಲುಗೆ ಟಿಕೇಟ್ ಕೊಡಿಸಿದ್ದೇ ನಾನು ಈಗ ರಾಮುಲು ನನಗೇ ಟಿಕೆಟ್ ಕೊಟ್ಟಿಲ್ಲ ಎಂದರು.

ಮದುವೆಗೆ ಕರೆದಿಲ್ಲ :

ಜನಾರ್ದನ ‌ರೆಡ್ಡಿ ಮಗಳ ಮದುವೆಗೆ ನನಗೆ ಆಹ್ವಾನವಿರಲಿಲ್ಲ. ಕರೆಯದ ಮೇಲೆ ನಾನು ಹೋಗುವುದಾದರೂ ಹೇಗೆ? ಶ್ರೀರಾಮುಲು ನನ್ನ ಅನುಮತಿ ಪಡೆಯದೆ ಬಳ್ಳಾರಿಯಲ್ಲಿ ಸುಳ್ಳು ದಾಖಲೆ ತೋರಿಸಿ‌ ಹತ್ತು ಸೈಟ್ ಮಾರಾಟ ಮಾಡಿದ್ದಾನೆ. ಇದರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇನೆ ಎಂದರು.

ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅವರು ಜಾತಿ ನಿಂದನೆ ಕೇಸ್ ಹಾಕಿದ್ದಾರೆ. ಜಾತಿನಿಂದನೆ ನಡೆದಿದೆ ಎನ್ನಲಾಗಿರುವ ದಿನ ನಾನು ಊರಿನಲ್ಲೇ ಇರಲಿಲ್ಲ. ಹರಪನಹಳ್ಳಿ ಕ್ಷೇತ್ರದ 300ಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ಶ್ರೀರಾಮುಲು ತಮ್ಮ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಮಾಧ್ಯಮಗಳನ್ನು ಬಳಸಿಕೊಂಡು ನನ್ನ ತೇಜೋವಧೆ ಮಾಡಲಾಗುತ್ತಿದೆ. ಬಿಜೆಪಿ ರಾಷ್ಟ್ರೀಯ ಪಕ್ಷ. ಯಾರು ಏನೇ ಮಾಡಿದರೂ ನನಗೆ ಟಿಕೆಟ್ ತಪ್ಪಿಸಲು ಸಾಧ್ಯವಿಲ್ಲ ಎಂದರು.

Leave a Reply

comments

Related Articles

error: