ಕ್ರೀಡೆ

ಪಾಕಿಸ್ತಾನ ತಂಡದ ನಾಯಕತ್ವದಿಂದ ಸರ್ಫರಾಝ್ ಅಹ್ಮದ್‌ ಉಚ್ಛಾಟನೆ

ಲಾಹೋರ್,ಅ.18-ಪಾಕಿಸ್ತಾನದ ಟ್ವೆಂಟಿ-20 ಹಾಗೂ ಟೆಸ್ಟ್ ತಂಡದ ನಾಯಕತ್ವದಿಂದ ಸರ್ಫರಾಝ್ ಅಹ್ಮದ್‌ರನ್ನು ಉಚ್ಛಾಟಿಸಲಾಗಿದೆ.

ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಬಾಬರ್ ಆಝುಂ ಹಾಗೂ ಅಝರ್ ಅಲಿ ಅವರನ್ನು ಕ್ರಮವಾಗಿ ಟ್ವೆಂಟಿ-20 ಹಾಗೂ ಟೆಸ್ಟ್ ತಂಡದ ನಾಯಕನ್ನಾಗಿ ನೇಮಿಸಿದೆ.

ಪಾಕ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದು ನನಗೆ ಲಭಿಸಿದ್ದ ಗೌರವವಾಗಿತ್ತು. ನಾಯಕರಾಗಿ ಆಯ್ಕೆಯಾಗಿರುವ ಅಝರ್ ಅಲಿ ಹಾಗೂ ಬಾಬರ್ ಆಝಂಗೆ ಶುಭಾಶಯ ಕೋರುವೆ ಎಂದು ಕಳೆದ ಕೆಲವು ಸರಣಿಗಳಲ್ಲಿ ಕಳಪೆ ಫಾರ್ಮ್‌ನಲ್ಲಿದ್ದ ಸರ್ಫರಾಝ್‌ ಹೇಳಿದ್ದಾರೆ.

ಏಳನೇ ರ್ಯಾಂಕಿನಲ್ಲಿರುವ ಪಾಕಿಸ್ತಾನ 5ನೇ ರ್ಯಾಂಕಿನಲ್ಲಿರುವ ಆಸ್ಟ್ರೇಲಿಯ ವಿರುದ್ಧ 2 ಟೆಸ್ಟ್‌ಗಳನ್ನು ಬ್ರಿಸ್ಬೇನ್(ನ.21-25) ಹಾಗೂ ಅಡಿಲೇಡ್(ನ.29-ಡಿ.3)ನಲ್ಲಿ ಆಡಲಿದೆ. ನ.3,5 ಹಾಗೂ 8ರಂದು ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಟಿ-20 ಸರಣಿಯನ್ನಾಡಲಿದೆ. (ಎಂ.ಎನ್)

 

Leave a Reply

comments

Related Articles

error: