ಮೈಸೂರು

ಅನರ್ಹರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ : ಹಿಂಪಡೆಯಲು ಆಗ್ರಹ

ಮೈಸೂರು.ಅ.18 : ಪ್ರಸಕ್ತ ಸಾಲಿನಲ್ಲಿ ಸರ್ಕಾರದ ಕೊಡಮಾಡಲ್ಪಡುವ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯು ಬೀಕರಿಯಾಗಿದ್ದು ವ್ಯಾಪಕ ಭ್ರಷ್ಟಾಚಾರವಾಗಿದೆ ಎಂದು ಕರ್ನಾಟಕ ರಾಜ್ಯ ಬುಡಕಟ್ಟು ಹಿತರಕ್ಷಣಾ ಸಂಘವು ಆಕ್ಷೇಪ ವ್ಯಕ್ತಪಡಿಸಿದೆ.

ಪ್ರಶಸ್ತಿಗೆ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಲು ಸರ್ಕಾರ ವಿಫಲವಾಗಿದೆ, ಅಲ್ಲದೇ ರಾಜಕೀಯ ಒತ್ತಡ, ಅಧಿಕಾರ ದುರುಪಯೋಗವಾಗಿದ್ದು, ಇದರಿಂದ ಪ್ರಶಸ್ತಿಗೆ ಮಾಡಿರುವ ಅಪಮಾನ. ಡಾ.ಕಮಲ ಹಂಪನಾ ಅವರನ್ನು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದು, ನಂತರ ವಿಶ್ರಾಂತ ಕುಲಪತಿ ಡಾ.ನಿರಂಜನ್ ಅವರನ್ನು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದು, ಇದನ್ನು ಒಂದೆರಡು ದಿನಗಳಲ್ಲಿಯೇ ಬದಲಾಗಿ ಅವರನ್ನೇ ಪ್ರಶಸ್ತಿಗೆ ಆಯ್ಕೆ ಮಾಡಲಾಗಿರುವುದು ಅವರು ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿರುವುದಕ್ಕೆ ಪ್ರಶಸ್ತಿ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ಹೆಚ್.ಸುಭಾಶ್ ಆರೋಪಿಸಿದ್ದಾರೆ.

ಅರ್ಹರಲ್ಲದವರಿಗೆ ಪ್ರಶಸ್ತಿ ನೀಡಿದ್ದು, ಇದರಿಂದ ಸಮಾಜ ಎಚ್ಚೆತ್ತುಕೊಳ್ಳಬೇಕು. ಅಲ್ಲದೇ ಅಪ್ರಯೋಜಕರಿಗೆ ನೀಡಿದ ಪ್ರಶಸ್ತಿಯನ್ನು ಮುಖ್ಯಮಂತ್ರಿಗಳು ಹಿಂಪಡೆಯಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: