ಸುದ್ದಿ ಸಂಕ್ಷಿಪ್ತ

ನಾಳೆ ಸಹಕಾರಿಗಳಿಗೆ ವಿಶೇಷ ತರಬೇತಿ

ಮೈಸೂರು.ಅ.18 : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಸಹಕಾರ ಇಲಾಖೆ ಸಂಯುಕ್ತಾವಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಒಂದು ದಿನದ ವಿಶೇಷ ತರಬೇತಿಯನ್ನು ಅ.19ರ ಬೆಳಗ್ಗೆ 11 ಗಂಟೆಗೆ ಚಾಮರಾಜ ಜೋಡಿ ರಸ್ತೆಯ ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಹೆಚ್.ವಿ.ರಾಜೀವ್ ಉದ್ಘಾಟಿಸುವರು. ಉಪಾಧ್ಯಕ್ಷ ಬಿ.ಎನ್.ಸದಾನಂದ ಅಧ್ಯಕ್ಷತೆ. ನಿರ್ದೇಶಕರಾದ ಎಸ್.ಚಂದ್ರಶೇಖರ್, ಡಾ.ಎಂ.ಬಿ.ಮಂಜೇಗೌಡ, ಪಿ.ಸತೀಶ್, ಶ್ರೀನಿವಾಸ್, ಅಬ್ದುಲ್ ಮುಜೀಬ್, ಡಾ.ಜಿ.ಉಮೇಶ್, ಕೆ.ಎಸ್.ಹರೀಶ್ ಕುಮಾರ್ ಇವರುಗಳು ಹಾಜರಿರಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: